ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ನ ಮಲಂಪುಳ ಪ್ರದೇಶದಲ್ಲಿ ಚಾರಣಿಗನೊಬ್ಬ ಕಾಲು ಜಾರಿ ಬಿದ್ದು ಬಂಡೆಗಳ ನಡುವಿನ ಬೆಟ್ಟದ ಕಂದಕದಲ್ಲಿ ಸಿಕ್ಕಿಬಿದ್ದು, ಎರಡು ದಿನಗಳಿಂದ ನೀರು ಆಹಾರವಿಲ್ಲದೆ ಕಾಲಕಳೆದಿದ್ದು, ಭಾರತೀಯ ಸೇನೆ ಆತನನ್ನು ಸುರಕ್ಷಿತವಾಗಿ ಅಲ್ಲಿಂದ ಮೇಲೆತ್ತಿದೆ..
ಸುಮಾರು 40 ನಿಮಿಷಗಳ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಹಗ್ಗ ಹಾಗೂ ಬೆಲ್ಟ್ ಸಹಾಯದಿಂದ ಯಶ್ವಿಯಾಗಿ ಹಾಗೂ ಸುರಕ್ಷಿತವಾಗಿ ಅಲ್ಲಿಂದ ಪಾರಾ ಮಾಡಲಾಗಿದೆ.
ಬಂಡೆಯ ಬೆಟ್ಟದಲ್ಲಿ ಸಿಲುಕಿರುವ ಯುವಕನನ್ನು ಆರ್ ಬಾಬು (23 ವರ್ಷ) ಎಂದು ಗುರುತಿಸಲಾಗಿದೆ. ಬಾಬು ತನ್ನ ಮೂವರು ಸ್ನೇಹಿತರೊಂದಿಗೆ ಸೋಮವಾರ ಮಲಂಪುಳದ ಚೇರಾದ್ ಬೆಟ್ಟಕ್ಕೆ ಚಾರಣ ಆರಂಭಿಸಿದ್ದಾರೆ. ಬಾಬು ತನ್ನ ಮೂವರು ಸ್ನೇಹಿತರೊಂದಿಗೆ ಸೋಮವಾರ ಮಲಂಪುಳದ ಚೇರಾದ್ ಬೆಟ್ಟಕ್ಕೆ ಚಾರಣ ಆರಂಭಿಸಿದ್ದಾರೆ. ಆದರೆ ಉಳಿದ ಇಬ್ಬರು ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ತಿದ್ದಾರೆ.
ಆದಾಗ್ಯೂ, ಬಾಬು ಮೇಲಕ್ಕೆ ಏರಲು ಮುಂದುವರೆಸಿ ತಲುಪಿದ ನಂತರ, ಕಾಲು ಜಾರಿ ಬಿದ್ದು, ಪರ್ವತದ ಬಂಡೆಗಳ ಸೀಳಿನ ನಡುವೆ ಸಿಲುಕಿಕೊಂಡಿದ್ದರು. ಬಿದ್ದ ಸಮಯದಲ್ಲಿ ಗಾಯಗೊಂಡ ಅವರು ನಂತರ ಚೆರಾಡ್ ಬೆಟ್ಟದಲ್ಲಿ ಸಿಕ್ಕಿಬಿದ್ದ ಸ್ಥಳದ ಸೆಲ್ಫಿ ಮತ್ತು ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಚಾರಣಿಗ ಸ್ನೇಹಿತರು ತಿಳಿಸಿದ್ದಾರೆ. ನಂತರ ಆತನ ಸ್ನೇಹಿತರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಅವರು ಸ್ಥಳೀಯಾಡಳಿತಕ್ಕೆ ತಿಳಿಸಿದ್ದಾರೆ.
ಕೇರಳ ಸರ್ಕಾರವು ಆಹಾರವಿಲ್ಲದೆ ಬಿಸಿಲಿನ ತಾಪದಲ್ಲಿ ಬಂಡೆಗಳ ನಡುವೆ ಬೆಟ್ಟದ ಭಾಗದಲ್ಲಿ ಸಿಲುಕಿದ್ದ ಯುವಕನ ರಕ್ಷಣೆಗೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸೇರಿದಂತೆ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಆದರೆ ಕಡಿದಾದದ ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕನ ರಕ್ಷಣೆ ಸಾದ್ಯವಾಗಲಿರಲಿಲ್ಲ. ಆಹಾರವಿಲ್ಲದೆ ಯುವಕ ಕ್ಷಣಕ್ಷಣಕ್ಕೂ ದುರ್ಬಲಗೊಳ್ಳುತ್ತಿದ್ದ. ಹೀಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಯುವಕನ ರಕ್ಷಿಸಲು ಭಾರತೀಯ ಸೇನೆಯ ಸೇನೆಯ ನೆರವು ಕೋರಿದ್ದರು. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಕೈಗೊಂಡು ಯುವಕನನ್ನು ರಕ್ಷಿಸಿದೆ.
ಇಂದು ಬೆಳಗ್ಗೆಯಿಂದಲೇ ಸೇನೆ ಮತ್ತು ನೌಕಾಪಡೆಯ ತಂಡಗಳ ಜೊತೆಗೆ ಭಾರತೀಯ ವಾಯುಪಡೆಯ ಪ್ಯಾರಾ ಕಮಾಂಡೋ ಕಾರ್ಯಚಾರಣೆ ನಡೆಸಿದ್ದು, ಮಲಂಪುಳದ ಚೇರಾದ್ ಬೆಟ್ಟದಲ್ಲಿ ಸಿಲುಕಿದ್ದ ಯುವಕರನ್ನು ಸೇನಾ ತಂಡ ಹಗ್ಗದಿಂದ ಮೇಲೆತ್ತಲು ಆರಂಭಿಸಿದೆ. ತಂಡವು ಬೆಳಿಗ್ಗೆ ಬಾಬು ಅವರಿಗೆ ಆಹಾರ ಮತ್ತು ನೀರನ್ನು ನೀಡಿದೆ. ಅವರು ಆಹಾರ ಸೇವಿಸಿದ ನಂತರ ಹಗ್ಗ ಹಾಗೂ ಬೆಲ್ಟ್ ಇಳಿಬಿಟ್ಟು ಸೇನೆಯವರು ಆತನೊಂದಿಗೆ ಮಾತನಾಡಿದ್ದಾರೆ. ನಂತರ ಹಗ್ಗ ಹಾಗೂ ಬೆಲ್ಟ್ ಸಹಾಯದಿಂದ ಆತನನ್ನು ರಕ್ಷಣೆ ಮಾಡಲಾಗಿದೆ.
ರಕ್ಷಣೆಯ ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. 30 ಸದಸ್ಯರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿದ್ದರು. ಮಿಷನ್ಗಾಗಿ ಅವರನ್ನು ಎರಡು ತಂಡಗಳಾಗಿ ನಿಯೋಜಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ