ಕರ್ನಾಟಕದಲ್ಲಿ ಹೊಸದಾಗಿ 5,339 ಕೊರೊನಾ ಸೋಂಕು ದಾಖಲು, 48 ಸಾವು

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಬುಧವಾರ ಹೊಸದಾಗಿ 5,339 ಸೋಂಕು ದಾಖಲಾಗಿದೆ. ಇದೇವೇಳೆ ರಾಜ್ಯದಲ್ಲಿ 48 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ 16,749 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 60,956 ರಷ್ಟಿದೆ. ಪಾಸಿಟಿವಿಟಿ ರೇಟ್ 4.14%ಕ್ಕೆ ಇಳಿದಿದೆ. ಕೋವಿಡ್-19 ಮರಣ ಪ್ರಮಾಣ ಶೇ.0.89% ರಷ್ಟಿದೆ.
ಬೆಂಗಳೂರಿನಲ್ಲಿ ಒಟ್ಟು 2,161 ಹೊಸ ಕೇಸ್ ಪತ್ತೆಯಾಗಿದೆ ಹಾಗೂ ಸೋಂಕಿನಿಂದ 16 ಜನರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ…
ಬಾಗಲಕೋಟೆ 67, ಬಳ್ಳಾರಿ 173, ಬೆಳಗಾವಿ 327, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು ನಗರ 2,161, ಬೀದರ್ 28, ಚಾಮರಾಜನಗರ 111, ಚಿಕ್ಕಬಳ್ಳಾಪುರ 70, ಚಿಕ್ಕಮಗಳೂರು 53, ಚಿತ್ರದುರ್ಗ 136, ದಕ್ಷಿಣ ಕನ್ನಡ 103, ದಾವಣಗೆರೆ 28, ಧಾರವಾಡ 132, ಗದಗ 31, ಹಾಸನ 139, ಹಾವೇರಿ 55, ಕಲಬುರಗಿ 111, ಕೊಡಗು 119, ಕೋಲಾರ 50, ಕೊಪ್ಪಳ 25, ಮಂಡ್ಯ 158, ಮೈಸೂರು 293, ರಾಯಚೂರು 75, ರಾಮನಗರ 32, ಶಿವಮೊಗ್ಗ 185, ತುಮಕೂರು 342, ಉಡುಪಿ 97, ಉತ್ತರ ಕನ್ನಡ 60, ವಿಜಯಪುರ 103 ಮತ್ತು ಯಾದಗಿರಿಯಲ್ಲಿ 6 ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ ; ಕಾರಣ ಏನು ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement