ಮಲಾಲಾ ರಕ್ಷಿಸಲಾಗದ ದೇಶ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಭಾರತಕ್ಕೆ ಪಾಠ ಮಾಡುವುದು ಬೇಡ: ಪಾಕ್‌ ವಿದೇಶಾಂಗ ಸಚಿವರಿಗೆ ತಿವಿದ ಓವೈಸಿ

ನವದೆಹಲಿ: ಕರ್ನಾಟಕದ ಹಿಜಾಬ್‌ ವಿವಾದದ ಸಂಬಂಧ ಬುಧವಾರ ಬೆಳಗ್ಗೆ ಬಾಲಕಿಯರ ಶಿಕ್ಷಣದ ಕುರಿತು ಭಾರತಕ್ಕೆ ಉಪನ್ಯಾಸ ನೀಡಲು ಯತ್ನಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಡಕ್‌ ಉತ್ತರ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಮಲಾಲಾಳನ್ನು ರಕ್ಷಿಸಲಾಗದ ದೇಶವು ಹೆಣ್ಣು ಶಿಕ್ಷಣದ ಬಗ್ಗೆ ಭಾರತಕ್ಕೆ ಉಪನ್ಯಾಸ ನೀಡಬಾರದು ಎಂದು ಖಡಕ್‌ ಉತ್ತರ ನೀಡಿದ್ದು, ಪಾಕಿಸ್ತಾನದ ವಿದೇಶ ಸಚಿವರಿಗೆ ತಮ್ಮ ಸ್ವಂತ ವ್ಯವಹಾರವನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಾರತಕ್ಕೆ ಹೆಣ್ಣು ಶಿಕ್ಷಣದ ಕುರಿತು ಉಪನ್ಯಾಸ ನೀಡುವ ಅಗತ್ಯವಿಲ್ಲ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ ಮಲಾಲಾ ಅವರಿಗೆ ಗುಂಡು ಹಾರಿಸಲಾಯಿತು. ಅವರು ತಮ್ಮ ಹೆಣ್ಣುಮಕ್ಕಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ ಮತ್ತು ಈಗ ಭಾರತಕ್ಕೆ ಉಪನ್ಯಾಸ ಮಾಡುತ್ತಿದ್ದಾರೆ” ಎಂದು ಖಾರವಾಗಿ ಉತ್ತರ ನೀಡಿದ್ದಾರೆ.
ಭಾರತವು ‘ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಮೂಲಕ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ ನಂತರ ಓವೈಸಿ ಈ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುವುದು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ” ಎಂದು ಶಾ ಮಹಮೂದ್ ಖುರೇಷಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದು ಮುಸ್ಲಿಮರ ಘೆಟ್ಟೋಲೈಸೇಶನ್‌ನ ಭಾರತದ ಯೋಜನೆಯ ಭಾಗವಾಗಿದೆ ಎಂದು ಜಗತ್ತು ಅರಿತುಕೊಳ್ಳಬೇಕು” ಎಂದು ಖುರೇಷಿ ಹೇಳಿದ್ದಾರೆ.
ಪಾಕಿಸ್ತಾನಿ ವಿದೇಶಾಂಗ ಸಚಿವರಿಗೆ ಉತ್ತರಿಸಿದ ಓವೈಸಿ, ಕರ್ನಾಟಕದ ಹಿಜಾಬ್ ವಿವಾದ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಇತರರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ಜನರು ತಮ್ಮ ಆಂತರಿಕ ಸಂಘರ್ಷಗಳ ಬಗ್ಗೆ ಚಿಂತಿಸಬೇಕು, ನಮ್ಮ ಸಮಸ್ಯೆಗಳಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

 

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮೂರನೇ ಹಂತದಲ್ಲಿ ಅಂದಾಜು 64.4%ರಷ್ಟು ಮತದಾನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement