ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ

ನವದೆಹಲಿ: ಟಾಟಾ ಸನ್ಸ್‌ನ ಎರಡನೇ ಸಲ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಶುಕ್ರವಾರ ಮರು ನೇಮಕಗೊಂಡಿದ್ದಾರೆ.
ಮರು ನೇಮಕಾತಿಯನ್ನು ಮಂಡಳಿಯು ಅನುಮೋದಿಸಿದೆ ಎಂದು ಟಾಟಾ ಸನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ 11ರಂದು ನಡೆದ ಸಭೆಯಲ್ಲಿ, ಟಾಟಾ ಸನ್ಸ್ ಮಂಡಳಿಯು ಕಳೆದ ಐದು ವರ್ಷಗಳ ಪ್ರಗತಿ ಪರಿಶೀಲಿಸಿತು ಮತ್ತು ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಮರುನೇಮಕವನ್ನು ಪರಿಗಣಿಸಿತು” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಈ ಸಭೆಗೆ ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ ಅವರು ಚಂದ್ರಶೇಖರನ್ ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್‌ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಟಾಟಾ ಸನ್ಸ್ ಪ್ರಕಾರ, ಅವರ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ನವೀಕರಿಸಲು ರತನ್‌ ಟಾಟಾ ಅವರು ಶಿಫಾರಸು ಮಾಡಿದರು.
ಮಂಡಳಿಯ ಸದಸ್ಯರು ಕಾರ್ಯಾಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿದರು ಮತ್ತು ಮುಂದಿನ ಐದು ವರ್ಷಗಳ ಅವಧಿಗೆ ಚಂದ್ರಶೇಖರನ್ ಅವರನ್ನು ಕಾರ್ಯಾಧ್ಯಕ್ಷರಾಗಿ ಮರುನೇಮಕ ಮಾಡಲು ಸರ್ವಾನುಮತದಿಂದ ಅನುಮೋದಿಸಿದರು ಎಂದು ಟಾಟಾ ಸನ್ಸ್ ತಿಳಿಸಿದೆ.
ಕಳೆದ ಐದು ವರ್ಷಗಳಿಂದ ಟಾಟಾ ಗ್ರೂಪ್ ಅನ್ನು ಮುನ್ನಡೆಸುವುದು ಒಂದು ಸುಯೋಗವಾಗಿದೆ ಮತ್ತು ಅದರ ಮುಂದಿನ ಹಂತದಲ್ಲಿ ಇನ್ನೂ ಐದು ವರ್ಷಗಳ ಕಾಲ ಟಾಟಾ ಗ್ರೂಪ್ ಅನ್ನು ಮುನ್ನಡೆಸುವ ಅವಕಾಶಕ್ಕಾಗಿ ನಾನು ಸಂತೋಷಪಡುತ್ತೇನೆ” ಎಂದು ಚಂದ್ರಶೇಖರನ್ ಹೇಳಿದರು.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement