ಕರ್ನಾಟಕದಲ್ಲಿ ಸತತ ಎರಡನೇ ದಿನವೂ 4 ಸಾವಿರಕ್ಕೂ ಕಡಿಮೆ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಸತತ ಎರಡನೇ ದಿನವೂ 4 ಸಾವಿರಕ್ಕೂ ಕಡಿಮೆ ಕೊರೊನಾ ಸೋಂಕುಗಳು ದಾಖಲಾಗಿವೆ. ರಾಜ್ಯದಲ್ಲಿ ಇಂದು, ಶನಿವಾರ ಹೊಸದಾಗಿ 3202 ಕೊರೊನಾ ಸೋಂಕು ದಾಖಲಾಗಿದೆ.

ಶುಕ್ರವಾರ 3,976 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ರಾಜ್ಯದಲ್ಲಿ ಶನಿವಾರ 8988 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಇದೇವೇಳೆ 38 ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 38747ಕ್ಕೆ ಇಳಿಕೆಯಾಗಿದೆ. ಒಟ್ಟು ಕೋವಿಡ್ ಮರಣ ಸಂಖ್ಯೆ 39,613ಕ್ಕೆ ಏರಿಕೆಯಾಗಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ 2.95ಕ್ಕೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 1293 ಮಂದಿಗೆ ಸೋಂಕು ತಗುಲಿದೆ ಹಾಗೂ 10 ಮಂದಿ ಸೋಂಕಿತರು ರಾಜಧಾನಿಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಶನಿವಾರ 3,833 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 15,679 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ 2.49ಕ್ಕೆ ತಗ್ಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 40, ಬಳ್ಳಾರಿ 126, ಬೆಳಗಾವಿ 250, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 1293, ಬೀದರ್ 23, ಚಾಮರಾಜ ನಗರ 62, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 21, ಚಿತ್ರದುರ್ಗ 91, ದಕ್ಷಿಣ ಕನ್ನಡ 62, ದಾವಣಗೆರೆ 19, ಧಾರವಾಡ 69, ಗದಗ 38, ಹಾಸನ 60, ಹಾವೇರಿ 19, ಕಲಬುರಗಿ 43, ಕೊಡಗು 99, ಕೋಲಾರ 32, ಕೊಪ್ಪಳ 18, ಮಂಡ್ಯ 42, ಮೈಸೂರು 197, ರಾಯಚೂರು 22, ರಾಮನಗರ 20, ಶಿವಮೊಗ್ಗ 155, ತುಮಕೂರು 142, ಉಡುಪಿ 67, ಉತ್ತರ ಕನ್ನಡ 62, ವಿಜಯಪುರ 54 ಹಾಗೂ ಯಾದಗಿರಿಯಲ್ಲಿ 5 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಪ್ರಮುಖ ಸುದ್ದಿ :-   ಸಿಎಂ ಬದಲಾವಣೆ ಕುರಿತು ಹೇಳಿಕೆ ; ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement