
ಕುಶಾಲನಗರ: ಕೆಸರಿನಲ್ಲಿ ಸಿಲುಕಿದ್ದ 8 ವರ್ಷದ ಕಾಡಾನೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಪಂಚಾಯತ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಕೆಸರಿನಲ್ಲಿ ಸಿಲುಕಿ ಹೆಣಗಾಡುತ್ತಿದ್ದ ಹೆಣ್ಣು ಕಾಡಾನೆಯನ್ನು ರಕ್ಷಿಸಲಾಗಿದೆ. ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಕಾಡಾನೆ ರಕ್ಷಣೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಧನಂಜಯ ಮತ್ತು ಅಯ್ಯಪ್ಪ ಆನೆಗಳ ಸಹಾಯ ಪಡೆದು ಸಾಕಾನೆಯನ್ನು ಮೇಲಕ್ಕೆತ್ತಲಾಗಿದೆ. ನಿತ್ರಾಣಗೊಂಡಿರುವ ಕಾಡಾನೆಗೆ ಇಲಾಖೆಯ ಪಶು ವೈದ್ಯ ಡಾ.ಚಿಟ್ಟಿಯಪ್ಪ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡಾನೆಗೆ ಆಹಾರ ನೀಡಲಾಗುತ್ತಿದೆ. ಆನೆಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ದಿನಗಳಲ್ಲಿ ಆನೆಯ ಆರೋಗ್ಯ ಸ್ಥಿತಿ ಸಹಜವಾಗುವ ವಿಶ್ವಾಸವಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ