ದೆಹಲಿಯ ನರೇಲಾದಲ್ಲಿ ಮನೆ ಕುಸಿದು 4 ಸಾವು, ಇಬ್ಬರಿಗೆ ಗಾಯ

ನವದೆಹಲಿ: ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶುಕ್ರವಾರ ನಾಲ್ಕು ಅಂತಸ್ತಿನ ಮನೆ ಕುಸಿದು ಒಂಬತ್ತು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಗಾಯಗೊಂಡ ಇಬ್ಬರು ಮಹಿಳೆಯರನ್ನು – ಫಾತಿಮಾ ಮತ್ತು ಶೆಹ್ನಾಜ್ ಎಂದು ಗುರುತಿಸಲಾಗಿದೆ -ಅವರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಮತ್ತು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಆದರೆ, ಶೆಹನಾಜ್ ಅವರ ಒಂಭತ್ತು ವರ್ಷದ ಪುತ್ರಿ ಹಾಗೂ ಇತರ ಮೂವರು ಬದುಕುಳಿದಿರಲಿಲ್ಲ. ಒಂಬತ್ತು ವರ್ಷದ ಅಫ್ರೀನ್ ಮತ್ತು ರುಕೇಯಾ ಖಾತೂನ್, ಶೆಹ್ಜಾದ್ ಮತ್ತು ಡ್ಯಾನಿಶ್ ಅವಶೇಷಗಳಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಧ್ಯಾಹ್ನ 2: 45ರ ವೇಳೆಗೆ ಕುಸಿತದ ವರದಿ ಬಂದಿತ್ತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಜೆಸಿಬಿ ಯಂತ್ರ ಮತ್ತು ಎರಡು ಆಂಬ್ಯುಲೆನ್ಸ್‌ಗಳನ್ನು ಸಹ ಕಳುಹಿಸಲಾಗಿದೆ.
“ಕುಸಿದ ಮನೆ ರಾಜೀವ್ ರತನ್ ಆವಾಸದಲ್ಲಿ 300-400 ಫ್ಲಾಟ್‌ಗಳ ಸಮೂಹದಲ್ಲಿದೆ” ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement