ವಂಚನೆ ಆರೋಪ: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಅನಿಲ್ ಅಂಬಾನಿಗೆ ಸೆಬಿ ನಿರ್ಬಂಧ

ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನಿಂದ ಇತರ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಉದ್ಯಮಿ ಅನಿಲ್‌ ಅಂಬಾನಿಗೆ ಭಾರತೀಯ ಷೇರು ವಿನಿಮಯ ಮಂಡಳಿ ಸೆಬಿ ನಿರ್ಬಂಧ ಹೇರಿದೆ.
ಆರ್ಥಿಕವಾಗಿ ದುರ್ಬಲ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣದ ವ್ಯವಹಾರ ನಡೆಸುವಲ್ಲಿ ಆರ್‌ಎಚ್‌ಎಫ್‌ಎಲ್‌ನ ಆಯಾಕಟ್ಟಿನ ಹುದ್ದೆಗಳಲ್ಲಿರುವವರು ಅನಿಲ್‌ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಪತ್ತೆ ಮಾಡಿದೆ.
ಮುಂದಿನ ಆದೇಶದವರೆಗೆ ಸೆಬಿಯಲ್ಲಿ ನೋಂದಾಯಿತ ಯಾವುದೇ ದಲ್ಲಾಳಿಗಳೊಂದಿಗೆ ಹಾಗೂ ಪಟ್ಟಿ ಮಾಡಲಾದ ಸಾರ್ವಜನಿಕ ಕಂಪನಿಯೊಂದಿಗೆ ಕಾರ್ಯನಿರ್ವಹಿಸುವುದನ್ನು ಮತ್ತು ಸಾರ್ವಜನಿಕ ಕಂಪನಿಯೊಂದಿಗೆ ನಿರ್ದೇಶಕರು/ಪ್ರವರ್ತಕರಾಗಿ ಕೆಲಸ ಮಾಡದಂತೆಯೂ , ಅಂಬಾನಿ ಮತ್ತಿತರಿಗೆ ಅದು ನಿರ್ಬಂಧಿಸಿದೆ. ಅನಿಲ್‌ ಅವರಿಗೆ ಸಂಬಂಧಿಸಿದಂತೆಯೂ ಸೆಬಿ ನಿರ್ದಿಷ್ಟ ಆಪಾದನೆಗಳನ್ನು ಮಾಡಿದೆ.
ಆರ್‌ಎಚ್‌ಎಫ್‌ಎಲ್‌ನ ಪ್ರವರ್ತಕರು ಮತ್ತು ವ್ಯವಸ್ಥಾಪಕರು ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಸೆಬಿ ಈ ಕ್ರಮ ಕೈಗೊಂಡಿದೆ. ಅಲ್ಲದೆ ವಿವಿಧ ಸಾಲದಾತರಿಂದ ಆರ್‌ಎಚ್‌ಎಫ್‌ಎಲ್‌ ಎರವಲು ಪಡೆದ ಹಣದಲ್ಲಿ ಭಾಗಶಃ ಮಾತ್ರ ಮರುಪಾವತಿಯಾಗಿದೆ ಎಂದು ಬ್ಯಾಂಕ್‌ಗಳಿಂದಲೂ ಸೆಬಿ ದೂರು ಸ್ವೀಕರಿಸಿತ್ತು.
ವಿವಿಧ ಸಾಲದಾತರಿಂದ ಆರ್‌ಎಚ್‌ಎಫ್‌ಎಲ್‌ನಿಂದ ಎರವಲು ಪಡೆದ ಹಣವನ್ನು ಭಾಗಶಃ ಸಾಲಗಳ ಮರುಪಾವತಿಗೆ ಬಳಸಲಾಗುತ್ತದೆ ಎಂದು ಆರೋಪಿಸಿ ಬ್ಯಾಂಕ್‌ಗಳಿಂದ ಬಹು ವಂಚನೆ ಮಾನಿಟರಿಂಗ್ ರಿಟರ್ನ್ಸ್ (FMR ಗಳು) ಇವೆ ಎಂದು ನಿಯಂತ್ರಕರು ಹೇಳಿದರು.
ವಿವಿಧ ಸಂಪರ್ಕಿತ ಪಕ್ಷಗಳು ಮತ್ತು ದುರ್ಬಲ ಹಣಕಾಸು ಹೊಂದಿರುವ ಕಂಪನಿಗಳನ್ನು ಆರ್‌ಎಚ್‌ಎಫ್‌ಎಲ್‌ನಿಂದ ಪ್ರವರ್ತಕ ಕಂಪನಿ ರಿಲಯನ್ಸ್ ಕ್ಯಾಪಿಟಲ್‌ಗೆ ಸಂಪರ್ಕ ಹೊಂದಿದ ಘಟಕಗಳಿಗೆ ಹಣವನ್ನು ಹೊರಹಾಕಲು ಮಾರ್ಗಗಳಾಗಿ ಬಳಸಲಾಗಿದೆ ಎಂದು ದೂರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement