ಮಹಾ ಸರ್ಕಾರದ ವೈನ್ ಮಾರಾಟ ನೀತಿ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ತಾತ್ಕಾಲಿಕ ರದ್ದು

ಮುಂಬೈ: ವಾಕ್-ಇನ್ ಸ್ಟೋರ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಫೆಬ್ರವರಿ 14ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಳೆದ ವಾರ ಘೋಷಿಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಮುಷ್ಕರವನ್ನು ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ.
ವಾಕ್-ಇನ್ ಸ್ಟೋರ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್‌ ಮಾರಾಟದ ನಿರ್ಧಾರವನ್ನು ಜಾರಿಗೆ ತರುವ ಮೊದಲು ನಾಗರಿಕರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಅವರಿಗೆ ಭರವಸೆ ನೀಡಿದ ನಂತರ ಅಣ್ಣಾ ಹಜಾರೆ ಅವರ ಈ ನಿರ್ಧಾರ ಹೊರ ಬಿದ್ದಿದೆ. ಸ
ಚಿವ ಸಂಪುಟದ ನಿರ್ಧಾರವನ್ನು ನಾಗರಿಕರ ಸಲಹೆ ಮತ್ತು ಆಕ್ಷೇಪಣೆಗಳಿಗೆ ಮುಂದಿಡಲು ಸರ್ಕಾರ ನಿರ್ಧರಿಸಿದೆ ಮತ್ತು ಅವರ ಅನುಮೋದನೆಯ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಹೀಗಾಗಿ, ನಾಳೆ, ಸೋಮವಾರದಿಂದ ಆರಂಭಿಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇನೆ ಎಂದು ಹಜಾರೆ ತಮ್ಮ ಗ್ರಾಮ ರಾಳೇಗಾಂವ್ ಸಿದ್ಧಿ ಗ್ರಾಮ ಸಭೆಯ ನಂತರ ಪ್ರಕಟಿಸಿದ್ದಾರೆ.
ಸಂವಾದದ ಸಂದರ್ಭದಲ್ಲಿ, ಹಜಾರೆ ಅವರು ‘ಈ ರೀತಿ ವೈನ್ ನಮ್ಮ ರಾಜ್ಯದ ಸಂಸ್ಕೃತಿಯಲ್ಲ’. ಮದ್ಯ ಮಾರಾಟವು ‘ನಮ್ಮ ಸಂಸ್ಕೃತಿಯನ್ನು ನಾಶಪಡಿಸುತ್ತದೆ ಎಂದು ಹೇಳಿದರು.
ವೈನ್ ಮಾರಾಟ ಮಾಡಲು ಹಲವಾರು ಬಾರ್‌ಗಳು, ಪರ್ಮಿಟ್ ರೂಮ್‌ಗಳು ಮತ್ತು ಅಂಗಡಿಗಳಿವೆ, ಆಡಳಿತ ವ್ಯವಸ್ಥೆಯು ಅದನ್ನು ಸೂಪರ್‌ಮಾರ್ಕೆಟ್‌ಗಳು ಮತ್ತು ಕಿರಾಣಿ ಅಂಗಡಿಗಳಲ್ಲಿ ಏಕೆ ಮಾರಾಟ ಮಾಡಬೇಕು? ಇದು ಜನರಿಗೆ ಕುಡಿತದ ಚಟವನ್ನು ಹರಡಲು ಬಯಸುತ್ತದೆಯೇ ಎಂದು ಅಣ್ಣಾ ಹಜಾರೆ ಪ್ರಶ್ನಿಸಿದ್ದಾರೆ.
ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಇದಕ್ಕೂ ಮೊದಲು 2011 ರಲ್ಲಿ, ಕೇಂದ್ರದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಭಾರತ (ಐಎಸಿ) ಚಳವಳಿಯ ನೇತೃತ್ವ ವಹಿಸಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀತಿಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement