ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗ ಕುಸಿದು ಮಗನ ತೋಳಿನಲ್ಲೇ ಪ್ರಾಣ ಬಿಟ್ಟ ತಾಯಿ-ದೃಶ್ಯ ವಿಡಿಯೊದಲ್ಲಿ ಸೆರೆ

ಅಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ವೇಳೆ ವರನ ತಾಯಿ ನೃತ್ಯ ಮಾಡುವಾಗ ಮಗನ ತೋಳುಗಳಲ್ಲಿ ಕುಸಿದು ಮೃತಪಟ್ಟ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ವಿಡಿಯೊವು ವೈರಲ್‌ ಆಗಿದ್ದು, ಮದುಮಗನ ಪಕ್ಕದಲ್ಲೇ ಮದುವೆ ಮೆರವಣಿಗೆಯಲ್ಲಿ ಡಿಜೆ ಟ್ಯೂನ್‌ಗೆ ನೃತ್ಯ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ 55 ವರ್ಷದ ನೀಲಂ ಇದ್ದಕ್ಕಿದ್ದಂತೆ ಕುಸಿದುಬೀಳುವುದು ವಿಡಿಯೊದಲ್ಲಿ ಕಂಡುಬಂದಿದೆ.

ತನ್ನ ತಾಯಿ ಕುಸಿದು ಬೀಳುತ್ತಿದ್ದಂತೆ ಮಗ, ವರ ನೀರಜ್ ಹಾಗೂ ಅಕ್ಕಪಕ್ಕದವರು ಅವಳನ್ನು ಹಿಡಿದಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ನೀಲಂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ 3 ರಂದು ನೀರಜ್ ಅವರ ಮದುವೆಯ ಮೆರವಣಿಗೆಯು ಚಿಕಾನಿಯಲ್ಲಿರುವ ಅವರ ಮನೆಯಿಂದ ಮರುದಿನ ಅಲ್ವಾರ್ ಜಿಲ್ಲೆಯ ಕಿಶನ್‌ಗಢ್ ಬಾಸ್‌ನಲ್ಲಿ ಮದುವೆಗೆ ಹೊರಟಿದ್ದಾಗ ಈ ಘಟನೆ ಸಂಭವಿಸಿದೆ. ನೀಲಂಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದವಂತೆ.

 

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement