ಎನ್ಎಸ್ಎ ಅಜಿತ್ ದೋವಲ್ ನಿವಾಸ ಪ್ರವೇಶಿಸಲು ಯತ್ನ: ಓರ್ವ ವ್ಯಕ್ತಿಯ ಬಂಧನ

ನವದೆಹಲಿ: ಬುಧವಾರ ಬೆಳಗ್ಗೆ ದೆಹಲಿಯಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ದೋವಲ್ ಅವರ ನಿವಾಸದ ಹೊರಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಚಾರಣೆಯ ನಂತರ, “ಯಾರೋ ತನ್ನ ದೇಹದೊಳಗೆ ಚಿಪ್ ಅನ್ನು ಇಟ್ಟಿದ್ದಾರೆ ಮತ್ತು ತನ್ನನ್ನು ನಿಯಂತ್ರಿಸಲಾಗುತ್ತಿದೆ” ಎಂದು ಆತ ಹೇಳಿಕೊಂಡಿದ್ದಾನೆ .ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. “ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆಂದು ತೋರುತ್ತದೆ” ಎಂದು ಪೊಲೀಸರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ದೋವಲ್ ಅವರ ನಿವಾಸವು ಝಡ್ ಪ್ಲಸ್’ ಭದ್ರತಾ ವರ್ಗದ ಅಡಿಯಲ್ಲಿ ಬರುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಮಾನಸಿಕವಾಗಿ ಅಸ್ಥಿರ ಎಂದು ಹೇಳಲಾದ ವ್ಯಕ್ತಿ ಮುಂಭಾಗದ ಗೇಟ್ ಅನ್ನು ಮುರಿಯಲು ಪ್ರಯತ್ನಿಸಿದ್ದಾನೆ, ಎನ್‌ಎಸ್‌ಎ ಕೆಲಸದಿಂದ ರಜೆ ಪಡೆದು ಇಂದು ಮನೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಆಸ್ಪತ್ರೆಯಲ್ಲಿ ಎಡವಟ್ಟು : 4 ವರ್ಷದ ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡುವುದರ ಬದಲು ನಾಲಿಗೆಗೆ ಆಪರೇಶನ್‌ ಮಾಡಿದ ವೈದ್ಯರು...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement