ಹಾಲು ಕೊಡಲು ತಡ ಮಾಡಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಪತಿರಾಯ..!

ನವದೆಹಲಿ: ತನಗೆ ಹಾಲು ನೀಡಲು ತಡ ಮಾಡಿದ ಕಾರಣಕ್ಕೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ಅಹಮದಾಬಾದ್‌ನಲ್ಲಿ ವರದಿಯಾಗಿದೆ.
ಮಂಗಳವಾರ ತನ್ನ 5 ವರ್ಷದ ಮಗಳು ಹಾಲು ಹಾಗೂ ಟಿಫಿನ್‌ ಕೇಳಿದ್ದಳು. ಅದೇ ಸಮಯದಲ್ಲಿ ಗಂಡನೂ ಹಾಲು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮಗುವಿಗೆ ಮೊದಲು ಹಾಲು ನೀಡಿ ನಂತರ ಪತಿಗೆ ಹಾಲನ್ನು ನೀಡಿದ್ದಾರೆ. ಈ ಕಾರಣಕ್ಕಾಗಿ ಪತಿ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
31 ವರ್ಷದ ಮಹಿಳೆ ಅಹಮದಾಬಾದ್‌ನ ಕರಂಜ್ ನಿವಾಸಿಯಾಗಿದ್ದು, ವರದಕ್ಷಿಣೆಗಾಗಿ ತನ್ನ ಪತಿ ಮತ್ತು ಅತ್ತೆಯ ಮೇಲೆ ಮಾನಸಿಕ ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಮದುವೆಯ ನಂತರ, ಮಹಿಳೆ ತನ್ನ ಅತ್ತೆಯೊಂದಿಗೆ 2008 ರಲ್ಲಿ ನಾಡಿಯಾಡ್‌ಗೆ ಸ್ಥಳಾಂತರಗೊಂಡಿದ್ದು, ಮದುವೆಯ ನಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. .
ಟೈಮ್ಸ್ ಆಫ್ ಇಂಡಿಯಾ (TOI) ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆಕೆಯ ಅತ್ತೆ, ಮಾವ ಮತ್ತು ಪತಿ 2021ರ ಡಿಸೆಂಬರ್‌ನಲ್ಲಿ ತನ್ನ ತಂದೆ-ತಾಯಿಯಿಂದ 1 ಲಕ್ಷ ರೂಪಾಯಿಗಳನ್ನು ತರುವಂತೆ ಹೇಳಿದರು. ಅದರ ನಂತರ ಜಗಳ ಪ್ರಾರಂಭವಾಯಿತು. ನಂತರ ತನ್ನ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿವೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

ದೂರಿನ ಪ್ರಕಾರ, ವರದಕ್ಷಿಣೆಗಾಗಿ ಜಗಳ ನಡೆದ ಸಂದರ್ಭದಲ್ಲಿ ಐದು ವರ್ಷದ ಮಗಳು ಹಾಲು ಮತ್ತು ತಿಂಡಿ ಕೇಳಿದ್ದಾಳೆ. ಅದೇ ಸಮಯದಲ್ಲಿ ಪತಿಯೂ ಹಾಲು ಕೊಡಲು ಕೇಳಿದ್ದಾನೆ. ಆದರೆ, ಮೊದಲು ಮಗಳಿಗೆ ಹಾಲು ನೀಡಿ ನಂತರ ಪತಿಗೆ ನೀಡುರುವುದು ಪತಿಯನ್ನು ಕೆರಳಿಸಿದೆ. ಪತ್ನಿ ತಡವಾಗಿ ನೀಡಿದ್ದಕ್ಕೆ ಸಿಟ್ಟುಗೊಂಡ ಪತಿ ಸಂಬಂಧಿಕರು ಹಾಗೂ ಪೋಷಕರ ಸಮ್ಮುಖದಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement