ಹೆಣ್ಣು ಆಕಳು ಕರುವಿನ ಮೇಲೆ ಅತ್ಯಾಚಾರ, ಕ್ರೌರ್ಯತೆ ಮರೆದ 4 ಮಂದಿ ಬಂಧನ

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಹೆಣ್ಣು ಕರುವನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ.
ಆರೋಪಿಗಳಲ್ಲಿ ಒಬ್ಬರು ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಮತ್ತೊಬ್ಬ ಆರೋಪಿ ಕರುವನ್ನು ಹಿಡಿದುಕೊಂಡಿದ್ದಾನೆ. ಘಟನೆ ವೇಳೆ ಮತ್ತಿಬ್ಬರು ಇದ್ದರು. ಅವರಲ್ಲಿ ಒಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

ಅಲ್ವಾರ್ ಜಿಲ್ಲೆಯ ಚೋಪಾಂಕಿಯ ಗುಡ್ಡಗಾಡು ಪ್ರದೇಶದಲ್ಲಿ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಫತೇಹ್ ಮೊಹಮ್ಮದ್ ಎಂಬಾತ ದೂರು ದಾಖಲಿಸಿದ್ದಾರೆ.
ಪ್ರಕರಣದ ನಾಲ್ವರು ಆರೋಪಿಗಳಾದ ಜುಬೈರ್, ತಾಲಿಮ್, ವಾರಿಸ್ ಮತ್ತು ಚುನಾ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ತಿಜಾರಾ ಮೇವಾತ್ ಪ್ರದೇಶದ ಅಡಿಯಲ್ಲಿ ಬರುತ್ತದೆ, ಇದು ಹರಿಯಾಣ ಮತ್ತು ರಾಜಸ್ಥಾನದ ಭಾಗಗಳನ್ನು ಒಳಗೊಂಡಿದೆ. ಈ ಹಿಂದೆ ಹಸು ಕಳ್ಳಸಾಗಣೆ, ಪೊಲೀಸರು ಮತ್ತು ಕಳ್ಳಸಾಗಾಣಿಕೆದಾರರ ನಡುವೆ ಎನ್‌ಕೌಂಟರ್ ಮತ್ತು ಗುಂಪು ಹತ್ಯೆಯ ಘಟನೆಗಳು ಈ ಪ್ರದೇಶದಲ್ಲಿ ವರದಿಯಾಗಿದ್ದವು.

ಆರೋಪಿಗಳ ವಿರುದ್ಧ ಸೆಕ್ಷನ್ 377 [ಭಾರತೀಯ ದಂಡ ಸಂಹಿತೆಯ] ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಣ್ಣು ಮರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕರುವು ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಗೆ ಸೇರಿದ್ದು,” ಎಂದು ಶಾಂತನು ಕೆ ಸಿಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಗಳ ಬೆಲೆ ಕಡಿಮೆ ಮಾಡಿದ ಸರ್ಕಾರ

ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆ
ಈ ಘಟನೆ ಜಿಲ್ಲೆಯ ಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ, ಎಲ್ಲಾ ಸಮುದಾಯಗಳ ಸಾವಿರಾರು ಜನರು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಿಜಾರಾದಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ನೀಡಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement