ಕೃಷಿ ಕ್ಷೇತ್ರದಲ್ಲಿ ಕೀಟನಾಶಕ ಸಿಂಪಡಿಸಲು 100 ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ದೇಶದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 100 ಕಿಸಾನ್‌ ಡ್ರೋನ್‌ಗಳಿಗೆ ಇಂದು, ಶನಿವಾರ ಚಾಲನೆ ನೀಡಿದ್ದಾರೆ.

ಡ್ರೋನ್‌ಗಳ ಅಪ್ಲಿಕೇಶನ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಹಿಂದೆ ಡ್ರೋನ್‌ಗಳನ್ನು ಸೇನೆ ಅಥವಾ ರಕ್ಷಣಾ ಪಡೆಗಳ ಆಯುಧವಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು ಆದರೆ ಇಂದು ಮನೇಸರ್‌ನಲ್ಲಿ ನಾವು ‘ಕಿಸಾನ್ ಡ್ರೋನ್ ಯಾತ್ರೆ’ಯನ್ನು ಉದ್ಘಾಟಿಸುತ್ತಿದ್ದೇವೆ. ಇದು ರೈತರ ತಾಂತ್ರಿಕ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವಾಗಿದೆ. ‘ಕಿಸಾನ್ ಡ್ರೋನ್ ಯಾತ್ರೆ’ ತಂತ್ರಜ್ಞಾನ ಕ್ಷೇತ್ರದಲ್ಲಿ ವಿವಿಧ ಅವಕಾಶಗಳನ್ನು ತೆರೆಯಲಿದೆ ಎಂದು ಹೇಳಿದ್ದಾರೆ.
21ನೇ ಶತಮಾನದ ಆಧುನಿಕ ಕೃಷಿ ಸೌಲಭ್ಯಗಳ ದಿಕ್ಕಿನ ಹೊಸ ಅಧ್ಯಾಯ ಇದಾಗಿದ್ದು, ಈ ಆರಂಭವು ಡ್ರೋನ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಅನಿಯಮಿತ ಸಾಧ್ಯತೆಗಳ ಹೊಸ ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಭಾರತದಲ್ಲಿ ಡ್ರೋನ್‌ಗಳ ಬಳಕೆಯ ಭವಿಷ್ಯದ ಯೋಜನೆಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿ, ರೈತರು ತಮ್ಮ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲು ಇವು ಸಹಕಾರಿಯಾಗಲಿವೆ. ಪ್ರಸ್ತುತ 21ನೇ ಶತಮಾನದಲ್ಲಿ ಆಧುನಿಕ ಕೃಷಿ ಪದ್ಧತಿಯೆಡೆಗಿನ ಒಂದು ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ. ಗರುಡ್ ಡ್ರೋನ್‌ಗಳು ಮುಂಬರುವ ಎರಡು ವರ್ಷಗಳಲ್ಲಿ 1 ಲಕ್ಷ ಮೇಡ್ ಇನ್ ಇಂಡಿಯಾ ಡ್ರೋನ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದು, ಇದು ಯುವಕರಿಗೆ ಹೊಸ ಉದ್ಯೋಗವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement