ಉಕ್ರೇನ್‌ನಿಂದ ಹೊರಡಿ: ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

ನವದೆಹಲಿ: ಉಕ್ರೇನ್‌ನಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದೆ. ರಷ್ಯಾವು ಯುದ್ಧ ವಿಮಾನಗಳ ಸಮೇತ ಯುದ್ಧಕ್ಕೆ ಸಜ್ಜಾಗಿ ನಿಂತಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ರಷ್ಯಾ ದಾಳಿ ನಡೆಸಬಹುದು ಸ್ಥಿತಿ ಏರ್ಪಟ್ಟಿದೆ. ಅದರ ಯುದ್ಧೋನ್ಮಾದ ತೀವ್ರವಾಗಿದೆ ಎಂದು ಅಮೆರಿಕ ಹೇಳುತ್ತಿದೆ.

ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಜೆಗಳೂ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದ್ದ ಭಾರತ, ಭಾನುವಾರ ಮತ್ತೊಂದು ಸೂಚನೆ ಹೊರಡಿಸಿದೆ. ಉಕ್ರೇನಲ್ಲಿ ಉಳಿದುಕೊಳ್ಳುವುದು ‘ಅತಿ ಅಗತ್ಯ ಎನಿಸದ ಹೊರತು’ ಅಲ್ಲಿ ಉಳುಯುವುದು ಬೇಡ, ಮರಳಿ ಬನ್ನಿ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.
ಉಕ್ರೇನ್‌ನಲ್ಲಿನ ಭಾರಿ ಪ್ರಮಾಣದ ಉದ್ವಿಗ್ನತೆ ಹಾಗೂ ಅನಿಶ್ಚಿತತೆಯ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇಲ್ಲಿ ಉಳಿದುಕೊಳ್ಳುವುದು ಅವಶ್ಯಕತೆಯಿಲ್ಲದ ಎಲ್ಲ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸಲಹೆ ನೀಡಲಾಗಿದೆ” ಎಂದು ರಾಯಭಾರ ಕಚೇರಿ ಹೇಳಿದೆ.

ಚಾರ್ಟರ್ ವಿಮಾನಗಳ ಕುರಿತಾದ ಮಾಹಿತಿಗೆ ಸಂಬಂಧಿತ ವಿದ್ಯಾರ್ಥಿ ಗುತ್ತಿಗೆದಾರರ ಜತೆಗೆ ಭಾರತೀಯ ವಿದ್ಯಾರ್ಥಿಗಳು ಸಂಪರ್ಕ ಹೊಂದಿರಬೇಕು. ಜತೆಗೆ ರಾಯಭಾರ ಕಚೇರಿಯ ಫೇಸ್‌ಬುಕ್, ವೆಬ್‌ಸೈಟ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಯಾವುದೇ ಮಾಹಿತಿಗಾಗಿ ಪರಿಶೀಲಿಸುತ್ತಾ ಇರಬೇಕು. ಉಕ್ರೇನ್‌ನಲ್ಲಿರುವ ಭಾರತೀಯರು ಮಾಹಿತಿ ಹಾಗೂ ಸಹಾಯಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಕೂಡ ಸಂಪರ್ಕಿಸಬಹುದು ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಉಕ್ರೇನ್‌ನಿಂದ ಭಾರತಕ್ಕೆ ಮರಳಿ ಬರಲು ಜನರಿಗೆ ಸಾಕಷ್ಟು ವಿಮಾನ ಟಿಕೆಟ್ ಸಿಗುತ್ತಿಲ್ಲ ಎಂದು ಕಳೆದ ವಾರ ವರದಿಯಾಗಿತ್ತು. ಯಾರೂ ಭಯಪಡಬೇಕಾದ ಅವಶ್ಯಕತೆಯಿಲ್ಲ. ಹೆಚ್ಚಿನ ವಿಮಾನ ಸೇವೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ಹೇಳಿತ್ತು. ಉಕ್ರೇನ್‌ನಿಂದ ಭಾರತಕ್ಕೆ ಹೆಚ್ಚುವರಿ ವಿಮಾನ ಸೇವೆಗಳನ್ನು ಆದಷ್ಟು ಶೀಘ್ರದಲ್ಲೇ ಆರಂಭಿಸಲಾಗುವುದು. ಎಲ್ಲರಿಗೂ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿತ್ತು. ಈಗ ಇದಕ್ಕಾಗಿಯೇ ಸಚಿವಾಲಯ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement