ಕರ್ನಾಟಕದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೊನಾ ದೈನಂದಿನ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದೈನಂದಿನ ಸೋಂಕು ಮತ್ತಷ್ಟು ಇಳಿಕೆಯಾಗಿದೆ. ಇಂದು, ಭಾನುವಾರ 1,001 ಕೊರೊನಾ ಪ್ರಕರಣಗಳು (Corona ದಾಖಲಾಗಿದೆ.

ಇದೇವೇಳೆ 1,780 ಜನರು ಗುಣಮುಖರಾಗಿದ್ದಾರೆ. ಹಾಗೂ ಸೋಂಕಿಗೆ 18 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ . ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣ12,634ಕ್ಕೆ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಶೇಕಡಾ 1.42 ಇದೆ. ಬೆಂಗಳೂರಿನಲ್ಲಿ ಇಂದು 485 ಜನರಿಗೆ ಕೊರೊನಾ ದೃಢಪಟ್ಟಿದ್ದು, ಕೊರೊನಾದಿಂದ 12 ಜನ ಸಾವಿಗೀಡಾಗಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ 15, ಬಳ್ಳಾರಿ 46, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 485, ಬೀದರ್ 2, ಚಾಮರಾಜನಗರ 20, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 5, ಚಿತ್ರದುರ್ಗ 22, ದಕ್ಷಿಣ ಕನ್ನಡ 14, ದಾವಣಗೆರೆ 3, ಧಾರವಾಡ 17, ಗದಗ 2, ಹಾಸನ 20, ಹಾವೇರಿ 12, ಕಲಬುರಗಿ 16, ಕೊಡಗು 42, ಕೋಲಾರ 4, ಕೊಪ್ಪಳ 1, ಮಂಡ್ಯ 10, ಮೈಸೂರು 48, ರಾಯಚೂರು 4, ರಾಮನಗರ 4, ಶಿವಮೊಗ್ಗ 22, ತುಮಕೂರು 93, ಉಡುಪಿ 23, ಉತ್ತರ ಕನ್ನಡ 3, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 4 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement