ಪುನೀತ್ ಸಾವಿನ ಆಘಾತ ಮಾಸುವ ಮುನ್ನವೇ ಪತ್ನಿ ಅಶ್ವಿನಿಗೆ ಮತ್ತೊಂದು ಆಘಾತ, ತಂದೆ ವಿಧಿವಶ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲುವಿಕೆಯಿಂದ ನೊಂದಿದ್ದ ಅಶ್ವಿನಿ ಅವರಿಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಅಶ್ವಿನಿ ತಂದೆ ಭಾಗಮನೆ ರೇವನಾಥ್ (78) ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ.
ಪುನೀತ್ ರಾಜ್​ಕುಮಾರ್​ ಅವರ ಮಾವ ಭಾಗಮನೆ ರೇವನಾಥ್​ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಂದೆ ಭಾಗಮನೆ ರೇವನಾಥ್​ ಅವರಿಗೆ 20 ವರ್ಷಗಳ ಹಿಂದೆ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಪುನೀತ್​ ರಾಜ್​ಕುಮಾರ್​ ನಿಧನದ ನಂತರ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಕೆಲವೇ ತಿಂಗಳ ಹಿಂದೆ ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು ಅಶ್ವಿನಿ ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಆ ನೋವು ಇನ್ನೂ ಹಸಿಯಾಗಿ ಇರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ.
ಹೆಚ್​ಎಐ ಮುಖ್ಯ ಇಂಜಿನಿಯರ್​ ಆಗಿ ಕೆಲಸ ಮಾಡಿದ್ದ ಬಿ.ರೇವನಾಥ್ ಅವರು ಚಿಕ್ಕಮಗಳೂರು ತಾಲೂಕಿನ ಬಾಗೇಮನೆಯವರಾಗಿದ್ದರು. ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.

ಅಪ್ಪುವಿನಂತೆ ಮಾವ ರೇವಾನಾಥ್​ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರೇವಾನಾಥ್ ನಿಧನದ ನಂತರ  ಕಣ್ಣಿನ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement