ಮದುವೆ ಸ್ಥಳಕ್ಕೆ ಹೊರಟ ಕಾರು ನದಿಗೆ ಬಿದ್ದು ವರ ಸೇರಿ ಒಂಬತ್ತು ಜನರ ಸಾವು

ಕೋಟಾ (ರಾಜಸ್ಥಾನ): ಶನಿವಾರ ತಡರಾತ್ರಿ ರಾಜಸ್ಥಾನದ ಕೋಟಾದಲ್ಲಿ ಮದುಮಗ ಪ್ರಯಾಣಿಸುತ್ತಿದ್ದ ಕಾರು ಚಂಬಲ್ ನದಿಗೆ ಬಿದ್ದ ಪರಿಣಾಮ ವರ ಸೇರಿದಂತೆ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮದುವೆ ಸ್ಥಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೋಟಾ ನಗರದ ಮೂಲಕ ಹಾದುಹೋಗುವ ಚಂಬಲ್ ನದಿಯ ರಾಜಕಾಲುವೆ ಸೇತುವೆಯಿಂದ ಕಾರು ನದಿಗೆ ಬಿದ್ದಿದೆ.
ಅವರು ಸವಾಯಿ ಮಾಧೋಪುರದ ಬರ್ವಾಡ ಪ್ರದೇಶದಿಂದ ಬರುತ್ತಿದ್ದರು. ರಾತ್ರಿ ನಡೆದ ಘಟನೆ ಯಾರಿಗೂ ತಿಳಿಯಲಿಲ್ಲ. ಬಳಿಕ ಸೇತುವೆಯಿಂದ ಕಾರು ಬಿದ್ದಿರುವುದನ್ನು ಕಂಡ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೋಟಾ ಮಹಾನಗರ ಪಾಲಿಕೆಯ ರಕ್ಷಣಾ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು.
ಕೋಟಾದ ಚಂಬಲ್ ನದಿಗೆ ಕಾರೊಂದು ಬಿದ್ದ ಪರಿಣಾಮ 9 ಮೃತದೇಹಗಳು ಪತ್ತೆಯಾಗಿವೆ. ವರ ಸೇರಿದಂತೆ ಪ್ರಾಣ ಕಳೆದುಕೊಂಡವರಲ್ಲಿ ಮದುವೆಗೆಂದು ಉಜ್ಜಯಿನಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಮತ್ತು ಕಾರು ಬರ್ವಾರಾ ಕಾ ಚೌತ್‌ನಿಂದ ಉಜ್ಜಯಿನಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿತ್ತು. ಕಾರು ಟ್ರ್ಯಾಕ್ ತಪ್ಪಿ ನದಿಯಲ್ಲಿ ಬಿದ್ದಿದೆ. ನಾವು ಕಾರಿನಿಂದ ಏಳು ಶವಗಳನ್ನು ಹೊರತೆಗೆದಿದ್ದೇವೆ ಮತ್ತು ಎರಡು ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದೇವೆ. ತನಿಖೆ ನಡೆಯುತ್ತಿದೆ” ಎಂದು ಕೋಟಾ ಪೊಲೀಸ್ ವರಿಷ್ಠಾಧಿಕಾರಿ ಕೇಸರ್ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಏತನ್ಮಧ್ಯೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement