ಕುಟುಂಬ ಸದಸ್ಯರಿಗೆ ತಡವಾಗಿ ಊಟ ಬಡಿಸಿದ್ದಕ್ಕೆ ಕೋಪಗೊಂಡ ಮದುಮಗ ಮದುವೆ ಬೇಡವೆಂದು ಮಂಟಪದಿಂದ ಪರಾರಿ..!

ಪಾಟ್ನಾ: ಬಿಹಾರದ ಪುರ್ನಿಯಾದಲ್ಲಿ ತನ್ನ ಕುಟುಂಬ ಸದಸ್ಯರಿಗೆ ತಡವಾಗಿ ಊಟ ಬಡಿಸಿದ ಕಾರಣಕ್ಕೆ ವರ ಮಹಾಶಯ ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ..!
ವರದಿಯ ಪ್ರಕಾರ, ತಡವಾಗಿ ಊಟ ಬಡಿಸಿದ ವಿಷಯವು ಉಲ್ಬಣಗೊಂಡಿತು ಮತ್ತು ವರನು ವಧುವಿನ ತಂದೆಯಿಂದ ಪಡೆದ ಎಲ್ಲಾ ಉಡುಗೊರೆಗಳನ್ನು ಹಿಂದಿರುಗಿಸಿ ಮದುವೆ ಮಂಟಪದಿಂದ ಜಾಗ ಖಾಲಿ ಮಾಡಿದ್ದಾನೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಪುರ್ನಿಯಾದ ಮೊಹಾನಿ ಪಂಚಾಯತ್‌ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ಈ ಘಟನೆ ನಡೆದಿದೆ. ವಧುವಿನ ತಾಯಿ ಮೀನಾ ದೇವಿ, ತನ್ನ ಮಗಳ ಮದುವೆಯನ್ನು ಪುರ್ನಿಯಾ ಜಿಲ್ಲೆಯ ಧಮ್ದಾಹ ಪೊಲೀಸ್ ಠಾಣೆ ವ್ಯಾಪ್ತಿಯ ಅಮರಿ ಕುಕ್ರೌನ್ ನಿವಾಸಿ ರಾಜ್‌ಕುಮಾರ್ ಓರಾನ್ ಅವರೊಂದಿಗೆ ನಿಶ್ಚಯಿಸುದ್ದರು ಎಂದು ಹೇಳಲಾಗಿದೆ.
ನಿಗದಿತ ಸಮಯಕ್ಕೆ ಮದುವೆ ದಿಬ್ಬಣ ಮದುವೆ ನಡೆಯುವ ಸ್ಥಳವನ್ನು ತಲುಪಿತು. ಆದರೆ ಮದುವೆ ಸಮಾರಂಭ ನಡೆಯುವಾಗ ವರನ ಕುಟುಂಬದ ಸದಸ್ಯರಿಗೆ ಊಟ ಹಾಕುವಲ್ಲಿ ವಿಳಂಬವಾಗಿತ್ತು. ಅದರ ನಂತರ, ವರ ಮತ್ತು ಅವನ ತಂದೆ ಕೋಪಗೊಂಡರು ಮತ್ತು ಮದುವೆ ಮುಂದುವರಿಸಲು ನಿರಾಕರಿಸಿದರು ಮತ್ತು ಮದುವೆ ನಿಲ್ಲಿಸಿ ವಾಪಸ್‌ ತೆರಳಲು ನಿರ್ಧರಿಸಿದರು. ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಎರಡು ಕಡೆಯವರ ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಯಾಕೆಂದರೆ ವರ ಸ್ಥಳದಿಂದ ಪರಾರಿಯಾಗಿದ್ದ..!.

ಪ್ರಮುಖ ಸುದ್ದಿ :-   ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

ತಡವಾಗಿ ಊಟ ಬಡಿಸಿದ್ದಕ್ಕೆ ವರನ ತಂದೆ ಕೋಪಗೊಂಡರು. ಅವರು ವಧುವಿನ ಕುಟುಂಬಕ್ಕೆ ಅಡುಗೆ ಮಾಡಲು ತಗಲುವ ವೆಚ್ಚವನ್ನು ಬೈಕ್ ಮತ್ತು ವರನಿಂದ ಪಡೆದ ಎಲ್ಲಾ ಉಡುಗೊರೆಗಳನ್ನು ಹಿಂದಿರುಗಿಸಿದರು. ವಧುವಿನ ತಾಯಿಯು ವರ ಹಾಗೂ ಆತನ ತಂದೆ ವಿರುದ್ಧ ಕಸ್ಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮದುವೆಗೆ ಖರ್ಚು ಮಾಡಿದ್ದ ಹಣವನ್ನು ವರನ ತಂದೆ ವಾಪಸ್ ನೀಡಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement