ಐಪಿಎಲ್‌-2022 ಕ್ರಿಕಟ್‌ ಪಂದ್ಯಾವಳಿ ಮಾರ್ಚ್ 26 ರಿಂದ ಪ್ರಾರಂಭ, 2 ನಗರಗಳಲ್ಲಿ 70 ಪಂದ್ಯಗಳು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2022 ಮಾರ್ಚ್ 26 ರಿಂದ ಆರಂಭವಾಗಲಿದೆ ಹಾಗೂ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ಪ್ರಕಟಿಸಿದೆ.
ಐಪಿಎಲ್‌-2022 ರಲ್ಲಿ 10 ತಂಡಗಳ ಈ ಸೀಸನ್ ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ 70 ಲೀಗ್ ಹಂತದ ಪಂದ್ಯಗಳು ಸೇರಿದಂತೆ 74 ಪಂದ್ಯಗಳನ್ನು ಹೊಂದಿರುತ್ತದೆ.
ಗುರುವಾರ ವರ್ಚುವಲ್‌ನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಪಿಎಲ್ 2022 ರ ವೇಳಾಪಟ್ಟಿಯನ್ನು ಖಚಿತಪಡಿಸಿದ್ದಾರೆ.
ಐಪಿಎಲ್ 2022 ಅನ್ನು ಜೈವಿಕ-ಸುರಕ್ಷಿತ ವಾತಾವರಣದಲ್ಲಿ ಆಡಲಾಗುವುದು ಮತ್ತು ಕೇವಲ ಎರಡು ಆತಿಥೇಯ ನಗರಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಹೇಳಿದೆ. ಕೋವಿಡ್ -19 ಸೋಂಕಿನ ಹರಡುವಿಕೆಗೆ ಪ್ರಮುಖ ಬೆದರಿಕೆ ಎಂದು ಪರಿಗಣಿಸಲಾದ ವಿಮಾನ ಪ್ರಯಾಣವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

10 ತಂಡಗಳು ಒಟ್ಟು 14 ಲೀಗ್ ಪಂದ್ಯಗಳಂತೆ ಒಟ್ಟು 70 ಲೀಗ್ ಪಂದ್ಯಗಳನ್ನು ಆಡುತ್ತವೆ, ನಂತರ 4 ಪ್ಲೇಆಫ್ ಪಂದ್ಯಗಳು. ಪ್ರತಿ ತಂಡವು 5 ತಂಡಗಳನ್ನು ಎರಡು ಬಾರಿ ಮತ್ತು ಉಳಿದ 4 ತಂಡಗಳು ಒಮ್ಮೆ ಮಾತ್ರ ಆಡುತ್ತದೆ. ಪ್ಲೇ-ಆಫ್ ಮತ್ತು ಫೈನಲ್‌ ನಡೆಯುವ ಸ್ಥಳಗಳನ್ನು ನಂತರದ ದಿನಾಂಕದಂದು ನಿರ್ಧರಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್ ಗ್ರೂಪ್ ಎ, ಚೆನ್ನೈ ಸೂಪರ್ ಕಿಂಗ್ಸ್ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಐಪಿಎಲ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ನಂತರ ಆಯಾ ತಂಡಗಳು ಆಡಿದ ಅಂತಿಮ ಪಂದ್ಯಗಳ ಸಂಖ್ಯೆಯನ್ನು ಆಧರಿಸಿ ತಂಡಗಳನ್ನು ಎರಡು ವರ್ಚುವಲ್ ಗುಂಪುಗಳಲ್ಲಿ ನಿಯೋಜಿಸಲಾಗಿದೆ.
ಗ್ರೂಪ್-Aನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕಾಣಿಸಿಕೊಂಡಿದೆ.
ಗ್ರೂಪ್-Bಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಇದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement