ದೇಹಕ್ಕೆ ಜಿಲೆಟಿನ್‌ ಕಟ್ಟಿಕೊಂಡು ಮನೆಬಿಟ್ಟು ಹೋದ ಹೆಂಡತಿ ತಬ್ಬಿಕೊಂಡು ಸ್ಫೋಟಿಸಿಕೊಂಡ ಗಂಡ..!

ಗುರುವಾರ, ಗುಜರಾತಿನ ಅರಾವಳಿ ಜಿಲ್ಲೆಯ ವ್ಯಕ್ತಿಯೊಬ್ಬ, ತನ್ನಿಂದ ದೂರವಾಗಿದ್ದ ಪತ್ನಿಯನ್ನು ತನ್ನೊಂದಿಗೆ ಮತ್ತೆ ಒಂದಾಗಲು ಮನವೊಲಿಸಲು ಸಾಧ್ಯವಾಗದೆ ಹತಾಸಗೊಂಡು ಸ್ಫೋಟಕ ಸಾಧನ ಕಟ್ಟಿಕೊಂಡು ಅವಳನ್ನು ತಬ್ಬಿಕೊಂಡ ಪರಿಣಾಮ ಇಬ್ಬರೂ ಸ್ಫೋಟಗೊಂಡ ಆಘಾತಕಾರಿ ಘಟನೆ ಗುಜರಾತಿನಲ್ಲಿ ವರದಿಯಾಗಿದೆ.
ಲಾಲಾ ಪಾಗಿ (45) ಎಂಬಾತ ತನ್ನ ಪತ್ನಿ ಶಾರದಾಳನ್ನು ಕೊಲ್ಲಲು ಸ್ಫೋಟಗೊಳಿಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ನಂತರ ತಿಳಿದುಬಂದಿದೆ. ಶಾರದಾ 45 ದಿನಗಳ ಹಿಂದೆ ತನ್ನ ಗಂಡ ಪಾಗಿ ಮನೆಯನ್ನು ತೊರೆದಿದ್ದಳು. ಅಂದಿನಿಂದ, ಪಾಗಿ ಅವಳನ್ನು ಮರಳಿ ಕರೆತರಲು ಅನೇಕ ಪ್ರಯತ್ನ ನಡೆಸಿದ್ದಾನೆ. ಆದರೆ ಯಶಸ್ವಿಯಾಗಲಿಲ್ಲ. ಕೊನೆಗೆ ಕೋಪಗೊಂಡ ಪಾಗಿ ಅವಳನ್ನು ಮುಗಿಸಿಬಿಡಲು ನಿರ್ಧರಿಸಿದ್ದಾನೆ.

ಗಂಡನ ಮನೆ ತೊರೆದ ನಂತರ, ಶಾರದಾ ಅಹಮದಾಬಾದ್‌ನಿಂದ ಸುಮಾರು 135 ಕಿಮೀ ದೂರದಲ್ಲಿರುವ ಮೇಘರಾಜ್ ಪಟ್ಟಣದಲ್ಲಿ ತನ್ನ ತಂದೆಯೊಂದಿಗೆ ಇದ್ದಳು. ಶಾರದಾ ಅವರ ಸೋದರ ಭಾವನ ಪ್ರಕಾರ, ಪಾಗಿ ಮತ್ತು ಅವರ ಕುಟುಂಬದ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದಾಗಿ ಶಾರದಾ ತನ್ನ ತಂದೆಯ ಮನೆಗೆ ಮರಳಬೇಕಾಯಿತು.
ಇಸ್ರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿಪಿ ವಘೇಲಾ ಅವರು, ಸ್ಫೋಟದಿಂದ ಶಾರದಾ ತಕ್ಷಣವೇ ಮೃತಪಟ್ಟಿದ್ದಾಳೆ ಮತ್ತು ಸ್ವಲ್ಪ ಸಮಯದ ನಂತರ ಪಾಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಅವರಿಗೆ 21 ವರ್ಷದ ಮಗ ಇದ್ದಾನೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ರಾತ್ರಿ 9 ಗಂಟೆಗೆ ಮೇಘರಾಜ್‌ನ ಬಿಟಿ ಚಾಪ್ರಾ ಪ್ರದೇಶದ ಬಳಿ ಪಾಗಿ ಪತ್ನಿ ಇರುವ ಮನೆ ತಲುಪಿದ ಕೂಡಲೇ ಅವರು ಅವಳನ್ನು ತಬ್ಬಿಕೊಂಡ ಮತ್ತು ನಂತರ ಸ್ಫೋಟ ಸಂಭವಿಸಿದೆ ಎಂದು ಶಾರದಾ ಕುಟುಂಬ ತಿಳಿಸಿದೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಜಯ್ ಖಾರತ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಭರತ್ ಬಸಿಯಾ ಕೂಡ ಅಪರಾಧ ಸ್ಥಳಕ್ಕೆ ತಲುಪಿದ್ದರು.
ಹೊಟ್ಟೆಗೆ ಎರಡು ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಅದರ ಮೇಲೆ ಪಾಗಿ ಶರ್ಟ್ ಧರಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವಘೇಲಾ ಹೇಳಿದ್ದಾರೆ.
ಪಾಗಿ ವಿರುದ್ಧ ಗುರುವಾರ ತಡರಾತ್ರಿ ಇಸ್ರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಫೋಟಕ ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ನಿಬಂಧನೆಗಳನ್ನು ಸಹ ಅನ್ವಯಿಸಲಾಗಿದೆ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement