ಎಮ್ಮೆ ಮೈ ತೊಳೆಸಲು ಹೋಗಿ ಕೆರೆಯಲ್ಲಿ ಮುಳುಗಿ ಸಾವು

ತುಮಕೂರು: ಎಮ್ಮೆಗಳಿಗೆ ಮೈತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಎಂ.ದಾಸರಹಳ್ಳಿ ಗ್ರಾಮದ ಗಂಗರಾಜು (27) ಹಾಗೂ ಹನುಮಂತರಾಜು (21) ಮದಲೂರು ಚಿಕ್ಕ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ಸಹೋದರರು. ಎಮ್ಮೆಗಳಿಗೆ ಮೈತೊಳೆಯಲು ಹೋದಾಗ ಹನುಮಂತರಾಜು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ.
ಆತನನ್ನು ರಕ್ಷಿಸಲು ಹೋದ ಅಣ್ಣ ಗಂಗರಾಜು ಸಹ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಕೆರೆಯಲ್ಲಿರುವ ಆಳವಾದ ಗುಂಡಿಗಳಿಗೆ ಬಿದ್ದ ಪರಿಣಾಮ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಹೇಳಲಾಗುತ್ತಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement