ಫೆಬ್ರವರಿ ತಿಂಗಳ ಜಿಎಸ್​ಟಿ ಸಂಗ್ರಹ 1,33,026 ಕೋಟಿ ರೂ.ಗಳು

ನವದೆಹಲಿ: 2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​ಟಿ ಆದಾಯವು 1,33,026 ಕೋಟಿ ರೂ.ಗಳಾಗಿವೆ.
ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್​ಟಿ 24,435 ಕೋಟಿ ರೂ.ಗಳು, ಎಸ್​ಜಿಎಸ್​ಟಿ 30,779 ಕೋಟಿ ರೂ.ಗಳು, ಐಜಿಎಸ್​ಟಿ 67,471 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 33,837 ಕೋಟಿ ರೂ.ಗಳೂ ಸೇರಿದಂತೆ) ಮತ್ತು ಸೆಸ್ 10,340 ಕೋಟಿ ರೂ.ಗಳು ಒಳಗೊಂಡಿದೆ.

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 26,347 ಕೋಟಿ ರೂ.ಗಳು ಮತ್ತು ಎಸ್‌ಜಿಎಸ್‌ಟಿಗೆ 21,909 ಕೋಟಿ ರೂ.ಗಳನ್ನು ಇತ್ಯರ್ಥ ಮಾಡಿದೆ. ನಿಯಮಿತ ಇತ್ಯರ್ಥದ ನಂತರ 2022ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿ ಗಾಗಿ 50,782 ಕೋಟಿ ರೂ.ಗಳು ಮತ್ತು ಎಸ್​ಜಿಎಸ್​ಟಿಗಾಗಿ 52,688 ಕೋಟಿ ರೂ.ಗಳಾಗಿವೆ. 2022ರ ಫೆಬ್ರವರಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್​ಟಿ ಆದಾಯಕ್ಕಿಂತ ಶೇ. 18ರಷ್ಟು ಹೆಚ್ಚಾಗಿದೆ ಮತ್ತು 2020ರ ಫೆಬ್ರವರಿಯಲ್ಲಿನ ಜಿಎಸ್​ಟಿ ಆದಾಯಕ್ಕಿಂತ ಶೇ.26ರಷ್ಟು ಅಧಿಕವಾಗಿದೆ.
ತಿಂಗಳ ಅವಧಿಯಲ್ಲಿ ಸರಕುಗಳ ಆಮದುಗಳಿಂದ ಆದಾಯವು ಶೇ.38ರಷ್ಟು ಹೆಚ್ಚಾಗಿದೆ ಮತ್ತು ಆದಾಯಗಳು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ. 12ರಷ್ಟು ಅಧಿಕವಾಗಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement