ವ್ರತ-ಧರ್ಮಾಚರಣೆ ಇಂದಿನ ಅವಶ್ಯ : ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ

ಧಾರವಾಡ: ಅಹಿಂಸೆ, ಅಪರಿಗ್ರಹ ಇಂದಿನ ಅವಶ್ಯಕತೆಗಳಾಗಿವೆ. ಹಿಂಸೆಯಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ವ್ರತ-ಧರ್ಮಾಚರಣೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗಿ ನಮ್ಮಲ್ಲಿರುವ ಕೆಟ್ಟ ವಿಚಾರಗಳನ್ನು ದೂರವಿಡಬಹುದು. ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಂಟಾಗುತ್ತದೆ ಎಂದು ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಧಾರವಾಡ ನಗರದ ಸನ್ಮತಿ ಜಿನ ಮಂದಿರದಲ್ಲಿ ನಡೆದ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬ ಪ್ರತಿಷ್ಠಾಮಹೋತ್ಸವ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಜೈನ ಧರ್ಮದ ಜೀವಾಳವೇ ಅಹಿಂಸೆ. ಮಕ್ಕಳಲ್ಲಿ ಯುವಕರಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಬೇಕಾಗಿದೆ. ನಮಗೆ ಸಾಧ್ಯವಾದಷ್ಟು ದಾನ ಧರ್ಮ ಮಾಡುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಾಳೆ ಎಂದರೆ ತಡವಾಗಬಹುದು. ಹೀಗಾಗಿ ಒಳ್ಳೆಯ ಅಭ್ಯಾಸಗಳನ್ನು ಇಂದಿನಿಂದಲೇ ಅಳವಡಿಸಿಕೊಳ್ಳಿ. ಕೋವಿಡ್ ನಮಗೆ ಸಂಬಂಧಗಳ ಬೆಲೆ ತಿಳಿಸಿದೆ. ದ್ವೇಷ, ಅಸೂಯೆ ಗುಣಗಳನ್ನು ಆದಷ್ಟೂ ದೂರ ಇಡಿ ಎಂದು ಹೇಳಿದರು.

ನಾಮ ಸ್ಥಂಭ ಮನಸ್ಸಿನಲ್ಲಿರುವ ಕಷಾಯಗಳನ್ನು ದೂರ ಮಾಡುತ್ತದೆ. ಮನಸ್ಸಿನಲ್ಲಿರುವ ಕಷಾಯಗಳನ್ನು ಹೊರಗೆ ಬಿಟ್ಟು ಜಿನದರ್ಶನ ಮಾಡಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಸ್ವರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನಕುಮಾರ ಹೇಳಿದರು.
ಧರ್ಮಕಾರ್ಯಗಳು ಸಮಾಜವನ್ನು ಒಗ್ಗೂಡಿಸುತ್ತವೆ. ಪ್ರೀತಿ ಗೌರವಗಳನ್ನು ಹಂಚುತ್ತವೆ. ದುಷ್ಟ ವಿಚಾರಗಳನ್ನು ದೂರ ಇಡುತ್ತವೆ. ಮಾನಸಿಕ ನೆಮ್ಮದಿಗೆ ಇಂತಹ ಆಚರಣೆಗಳು ಅವಶ್ಯ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ನ.ವಜ್ರಕುಮಾರ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಶೋಕ ಬಾಗಿ ಮಾತನಾಡಿ, ಸನ್ಮತಿ ಸೇವಾ ಸಮಾಜ ಬೆಳೆದು ಬಂದ ದಾರಿಯನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆಗೆ ಧರ್ಮಿಯರಿಗೆ ಜಿನಾಲಯ ಸ್ಥಾಪಿಸಿ ಜಿನದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾನ ಸ್ಥಂಭ ನಿರ್ಮಾಣಕೆ ಧನ ಸಹಾಯ ಮಾಡಿದ ಪಿ. ಸಿಂಹಸೇನ ದಂಪತಿಗೆ, ಡಾ. ನ. ವಜ್ರಕುಮಾರ ಮತ್ತು ಸುಮನಾ ವಜ್ರಕುಮಾರವರಿಗೆ, ಡಾ. ಅಜಿತ ಪ್ರಸಾದ ಮತ್ತು ವಾಣಿಶ್ರೀ ಪ್ರಸಾದರವರಿಗೆ, ನೇಮಿನಾಥ ಪತ್ರಾವಳಿ ಮತ್ತು ರೀಟಾ ಪತ್ರಾವಳಿಯವರಿಗೆ ಸನ್ಮಾನಿಸಲಾಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನಕುಮಾರ ಹಾಗೂ ಪದ್ಮಲತಾ ನಿರಂಜನಕುಮಾರ ಅವರನ್ನು, ಚಾವುಂಡರಾಯ ಪ್ರಶಸ್ತಿ ಪುರಸ್ಕೃತರಾದ ಡಾ. ಶಾಂತಿನಾಥ ದಿಬ್ಬದ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಡಾ. ಜಿನದತ್ತ ಹಡಗಲಿ, ಸಂಗೀತ ಕಾರ್ಯಕ್ರಮ ನಡೆಸಿದ ಜಯಶ್ರೀ ದಂಪತಿಗಳಿಗೆ, ಅಶೋಕ ಬಾಗಿ, ಚಾರುದತ್ತ ಬಾಗಿ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಾವೀರ ಉಪಾದ್ಯೆ ಕಾರ್ಯಕ್ರಮ ನಿರೂಪಿಸಿದರು. ಜಿನೇಂದ್ರ ಕುಂದಗೋಳ ವಂದಿಸಿದರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement