ಶಿರಸಿ: ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಚಿರತೆ ರಕ್ಷಣೆ..!

ಶಿರಸಿ: ಆಹಾರ ಅರಸಿ ಬಂದಿದ್ದ ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ವರದಿಯಾಗಿದೆ.
ಚಿರತೆ ಚೀರಾಟ ಕೇಳಿದ ಸ್ಥಳೀಯರು ತಕ್ಷಣವೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ವನ್ಯಜೀವಿ ವಲಯದ ವೈದ್ಯರ ತಂಡಕ್ಕೆ ಮಾಹಿತಿ ನೀಡಿತು. ನಂತರ ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಫಲರಾಗಿದ್ದಾರೆ. ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‍ಜಿ ಹೆಗಡೆ ನೇತೃತ್ವದಲ್ಲಿ ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.
ಈ ಹಿಂದೆಯೂ ಶಿರಸಿ ಬೆಂಗ್ಳೆ ಸಮೀಪ ಕಪ್ಪು ಚಿರತೆಯೊಂದು ತಂತಿಗೆ ಸಿಲುಕಿತ್ತು. ಆದರೆ ರಕ್ಷಣಾ ಕಾರ್ಯ ತಡವಾಗಿದ್ದರಿಂದ ಮೃತಪಟ್ಟಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement