ರಷ್ಯಾ-ಉಕ್ರೇನ್ ಬಿಕ್ಕಟ್ಟು : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ದೂರ ಉಳಿದ ಭಾರತ

ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಪರಿಣಾಮವಾಗಿ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗವನ್ನು ತುರ್ತಾಗಿ ಸ್ಥಾಪಿಸಲು ನಿರ್ಧರಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿನ ಮತದಾನದ ವೇಳೆ ಭಾರತವು ದೂರ ಉಳಿದಿದೆ.
47 ಸದಸ್ಯರ ಕೌನ್ಸಿಲ್ ಉಕ್ರೇನ್‌ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿತು. ಈ ನಿರ್ಣಯವನ್ನು ಪರವಾಗಿ 32 ಮತಗಳು, ಎರಡು ವಿರುದ್ಧ (ರಷ್ಯಾ ಮತ್ತು ಎರಿಟ್ರಿಯಾ) ಮತ್ತು ಭಾರತ, ಚೀನಾ, ಪಾಕಿಸ್ತಾನ, ಸುಡಾನ್ ಮತ್ತು ವೆನೆಜುವೆಲಾ ಸೇರಿದಂತೆ 13 ದೇಶಗಳು ಮತದಾನದಿಂದ ದೂರ ಉಳಿದವು.

ವಿಶ್ವಸಂಸ್ಥೆ ಸಾಮಾನ್ಯ ಸಭೆ ಈ ವಾರ ಉಕ್ರೇನ್ ಪ್ರದೇಶದಿಂದ ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು “ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ” ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸಲು ಮತ ಹಾಕಿತು. ಭಾರತ ಈ ನಿರ್ಣಯಕ್ಕೂ ಗೈರುಹಾಜರಾಗಿದ್ದು, ಅದರ ಪರವಾಗಿ 141 ಮತಗಳು, ವಿರುದ್ಧ ಐದು ಮತಗಳು ಮತ್ತು ಒಟ್ಟು 35 ದೇಶಗಳು ಗೈರು ಹಾಜರಾದವು.

ವಿಶ್ವಸಂಸ್ಥೆಗೆ ಭಾರತದ ರಾಯಭಾರಿ ಟಿ ಎಸ್ ತಿರುಮೂರ್ತಿ ಅವರು ಮತದಾನದ ವಿವರಣೆಯನ್ನು (ಇಒವಿ) ಒದಗಿಸಿದ್ದಾರೆ, ಅದು ಈ ವಿಷಯದಲ್ಲಿ ಭಾರತದ ನಿಲುವಿನ ಹಿಂದಿನ ತಾರ್ಕಿಕತೆಯನ್ನು ವಿವರಿಸಿದೆ. ತನ್ನ ಇಒವಿಯಲ್ಲಿ, ಭಾರತವು ರಾಜತಾಂತ್ರಿಕತೆಯ ಮಾತುಕತೆಯ ಹಾದಿಗೆ ಮರಳಲು ಮತ್ತು ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ಕರೆ ನೀಡಿತು.
ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸುವಂತೆ ಅದು ಎಲ್ಲಾ ಸಂಬಂಧಿತ ಪಕ್ಷಗಳಿಗೆ ಮನವಿ ಮಾಡಿದೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಭಾಷಣೆಯನ್ನು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement