ಜನನಿಬಿಡ ಪ್ರದೇಶದಲ್ಲಿ ಚಿರತೆಯ ನಗರ ಸಂಚಾರ.. ಜನರಿಗೆ ದಿಗಿಲೋ ದಿಗಿಲು..! ದೃಶ್ಯ ವಿಡಿಯೊದಲ್ಲಿ ಸೆರೆ

ಇತ್ತೀಚಿಗೆ ಕಾಡುಮೃಗಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಅಪಾಯಕಾರಿ ವನ್ಯಜೀವಿಗಳು ಕೆಲವೊಮ್ಮೆ ಜನರಲ್ಲಿ ಆತಂಕವನ್ನೂ ಉಂಟು ಮಾಡುತ್ತವೆ. ಇಂಥದ್ದೇ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೀರತ್‌ನಲ್ಲಿ ಜನವಸತಿ ಬೀದಿಗಳಲ್ಲಿ ಚಿರತೆಯೊಂದು ಸುತ್ತು ಹಾಕಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೀರತ್‌ನ ಪಲ್ಲವಪುರಂ ಪ್ರದೇಶದ ಮನೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಚಿರತೆ ಕಂಡ ಕೂಡಲೇ ಸಹಜವಾಗಿ ಜನರು ಗಾಬರಿಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನರಿಗೆ ಮನೆಯೊಳಗಿರುವಂತೆ ಸೂಚನೆ ನೀಡಲಾಯಿತು ಹಾಗೂ. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನೂ ಆರಂಭಿಸಲಾಯಿತು.

ಅರಣ್ಯ ಇಲಾಖೆ ಈ ಚಿರತೆಯನ್ನು ಸೆರೆ ಹಿಡಿಯಲು ಪರದಾಡಬೇಕಾಯಿತು, ಚಿರತೆ ಜನನಿಬಿಡ ಬೀದಿಯಲ್ಲಿ ಒಂದೆಡೆ ನಿಲ್ಲುತ್ತಿರಲಿಲ್ಲ. ಆದರೆ ಹರಸಾಹಸಪಟ್ಟು ಅರಣ್ಯ ಇಲಾಖೆ ಸುಮಾರು ಎಂಟು ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಿತು. ನಂತರ ಚಿರತೆಯನ್ನು ಕಾಡಿಗೆ ಕೊಂಡೊಯ್ದು ಬಿಡಲಾಯ್ತು. ಕೆಲವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement