ಎಕ್ಸಿಟ್‌ ಪೋಲ್‌: ಉತ್ತರಾಖಂಡದಲ್ಲಿ ತೀವ್ರ ಠಕ್ಕರ್‌ ಮಧ್ಯೆ ಕಾಂಗ್ರೆಸ್‌ಗಿಂತ ಬಿಜೆಪಿ ಮುಂದೆ

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಿತು. ಈ ನಿರ್ಣಾಯಕ ಚುನಾವಣೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳು ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ( AAP) ಪಕ್ಷಗಳು ಸೆಣಸಾಟ ನಡೆಸಿವೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 36-46 ಸ್ಥಾನಗಳೊಂದಿಗೆ ಉತ್ತರಾಖಂಡ್‌ನಲ್ಲಿ ಬಿಜೆಪಿಗೆ ಒಟ್ಟು ಮತ ಹಂಚಿಕೆಯ ಶೇಕಡಾ 44 ರಷ್ಟು ಮತ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ ಶೇಕಡಾ 40 ರಷ್ಟು ಗಳಿಸಬಹುದು ಹಾಗೂ 20-30 ಸ್ಥಾನಗಳನ್ನು ಗಳಿಸಬಹುದು, ನಂತರ ಬಿಎಸ್‌ಪಿ 2-4 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ.

ಪಿ-ಮಾರ್ಕ್‌ನ ಎಕ್ಸಿಟ್‌ ಪೋಲ್‌ ಪ್ರಕಾರ, ಬಿಜೆಪಿ 35 ರಿಂದ 39 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಕಾಂಗ್ರೆಸ್ 28 ರಿಂದ 34 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎಎಪಿ 3 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ 29 ರಿಂದ 34 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ 33 ರಿಂದ 38 ಸ್ಥಾನಗಳನ್ನು ಗೆಲ್ಲಲಿದೆ.ಮಾಯಾವತಿ ನೇತೃತ್ವದ ಬಿಎಸ್‌ಪಿ 1 ರಿಂದ 3 ಸ್ಥಾನಗಳನ್ನು ಗಳಿಸುವ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ಪಿ-ಮಾರ್ಕ್ ಎಕ್ಸಿಟ್ ಪೋಲ್‌ಗಳು
ಬಿಜೆಪಿ 35-39
ಕಾಂಗ್ರೆಸ್‌ 28-34
ಎಎಪಿ 0-3
ಇತರೆ 0-3

ಮ್ಯಾಟ್ರಿಕ್ಸ್ ಎಕ್ಸಿಟ್ ಪೋಲ್‌ಗಳು
ಬಿಜೆಪಿ 29-34
ಕಾಂಗ್ರೆಸ್‌ 33-38
ಬಿಎಸ್‌ಪಿ 1-3
ಇತರೆ 1-3

ಚಾಣಕ್ಯ ಎಕ್ಸಿಟ್ ಪೋಲ್ಸ್
ಚಾಣಕ್ಯ ಎಕ್ಸಿಟ್ ಪೋಲ್ ಬಿಜೆಪಿ 43 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 24 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಇದೇ ವೇಳೆ ಇತರೆ ಪಕ್ಷಗಳು 3 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
ಟೈಮ್ಸ್ ನೌ-ವೀಟೊ 70 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿದೆ, ಎಬಿಪಿ-ಸಿವೋಟರ್ ಪ್ರಕ್ಷೇಪಗಳು ಕಾಂಗ್ರೆಸ್ 32-38 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಿದೆ.ಝೀ ನ್ಯೂಸ್‌ ಕಾಂಗ್ರೆಸ್ 35-40 ಸ್ಥಾನಗಳನ್ನು ಭವಿಷ್ಯ ನುಡಿದಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement