ಬೀಳು ಜಮೀನು ಪ್ರಕರಣ: ಪಹಣಿ (RTC) ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ-ಸಚಿವ ಅಶೋಕ

ಬೆಂಗಳೂರು: ರಾಜ್ಯದಲ್ಲಿರುವ ಬೀಳು ಜಮೀನು ಪ್ರಕರಣಗಳಲ್ಲಿ ಆರ್ ಟಿ ಸಿ ಯನ್ನು ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನ ಪರಿಷತ್ ನ ಪ್ರಶ್ನೋತ್ತರದಲ್ಲಿ ಜೆಡಿಎಸ್ ನ ಶ್ರೀಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು ಅವರು, ರಾಜ್ಯದಲ್ಲಿ 1,08,09,018 ಎಕರೆ ಕಂದಾಯ ಬೀಳು ಜಮೀನುಗಳಿವೆ. 1966ರ ಕರ್ನಾಟಕ ಭೂ ಕಂದಾಯ ನಿಯಮ 119ದ ಪ್ರಕಾರ ಮೂರು ವರ್ಷದ ಕಂದಾಯ ಪಾವತಿ ಮಾಡದಿದ್ದರೆ ಅದನ್ನು ಬೀಳು ಭೂಮಿ ಎಂದು ಪಹಣಿಯಲ್ಲಿ ನಮೂದಿಸಲಾಗುತ್ತದೆ. ಅದನ್ನು ಬದಲಾವಣೆ ಮಾಡಲು 2014ರ ಸೆಪ್ಟಂಬರ್‌ 6ರ ವರೆಗೆ ಅವಕಾಶ ನೀಡಲಾಗಿತ್ತು. ಈಗ ಮತ್ತೊಮ್ಮೆ ಅವಕಾಶ ನೀಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗುವುದು ರೈತರು ಬಾಕಿ ಮೊಬಲಗನ್ನು ಪಾವತಿಸಿದರೆ ಪಹಣಿಯಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದು ಎಂದರು.

ಆಗ ಶ್ರೀಕಂಠೇಗೌಡರು, ಗ್ರಾಮ ಲೆಕ್ಕಿಗರು ದ್ವೇಷದಿಂದ ಅನಗತ್ಯವಾಗಿ ಬೀಳು ಜಮೀನು ಎಂದು ನಮೂದಿಸಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಅದನ್ನು ತೆಗೆಸದಿದ್ದರೆ ಭೂಮಿ ಪರಭಾರೆ ಮಾಡಲು ಆಗುವುದಿಲದಲ, ಸಾಲ ಪಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಶೇ.40ರಷ್ಟು ಜಮೀನನ್ನು ಬೀಳು ಭೂಮಿ ಎಂದು ನಮೂದಿಸಲಾಗಿದೆ. ಹೀಗಾಗಿ ವಿಶೇಷ ಅದಲಾತ್ ಮಾಡಿ ಪಹಣಿ ತಿದ್ದುಪಡಿ ಮಾಡಿಕೊಡಿ ಎಂದು ಸಲಹೆ ನೀಡಿದಾಗ ಸಚಿವರು ಅನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement