ಮಲ್ಪೆ: ಬೋಟ್ ನಲ್ಲಿ ಸಿಲುಕಿಕೊಂಡ 250 ಕೆಜಿ ತೂಕದ ಗರಗಸ ಮೀನು..!

ಉಡುಪಿ: ಮಲ್ಪೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರು ಮೀನೊಂದು ಬೋಟ್ ನಲ್ಲಿ ಸಿಲುಕಿಕೊಂಡಿದೆ.
ಸ್ಥಳೀಯ ಭಾಷೆಯಲ್ಲಿ ಇದನ್ನು ಗರಗಸ ಮೀನು (carpenter shark ) ಎಂದು ಕರೆಯಲಾಗುತ್ತದೆ ಹಾಗೂ ಇದಕ್ಕೆ ಗರಗಸ ಶಾರ್ಕ್ ಎಂದೂ ಹೇಳುತ್ತಾರೆ. ಹತ್ತು ಅಡಿಗೂ ಅಧಿಕ ಉದ್ದವಿರುವ ಮೀನಿನ ಬಾಯಿಂದ ಗರಗಸ ಮಾದರಿಯ ಮೊನಚಾದ ಹಲ್ಲುಗಳು ಹೊರ ಬಂದಿವೆ. ಹೀಗಾಗಿ ಇದನ್ನು ಈ ಹೆಸರಿನಿಂದ ಕರೆಯುತ್ತಾರೆ.

ಈ ಮೀನಿನ ತೂಕ ಸುಮಾರು 250 ಕೆಜಿ ಇದ್ದು, ಮೀನನ್ನು ನೋಡಲೆಂದು ಹಾರ್ಬರ್ ನೊಳಗೆ ಹಲವಾರು ಮಂದಿ ಸೇರಿದ್ದರು. ಬಳಿಕ ಕ್ರೈನ್ ನ ಸಹಾಯದಿಂದ ಬೋಟ್ ನಿಂದ ಮೀನನ್ನು ಮೇಲಕೆತ್ತಿ ಲಾರಿಯಲ್ಲಿ ತುಂಬಲಾಯಿತು. ನಂತರ ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.
ಈ ಜಾತಿಯ ಮೀನುಗಳು ಸಮುದ್ರದಲ್ಲಿ ಉಷ್ಣವಲಯ ಮತ್ತು ಉಪೋಷ್ಣವಲಯದಲ್ಲಿ ವಾಸಿಸುತ್ತವೆ ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement