ಚಂಡೀಗಡ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು ಈ ಮಧ್ಯೆ ಇತ್ತೀಚಿನ ಮಾಹಿತಿ ಪ್ರಕಾರ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸಿದು ಜೊತೆ ಜಗಳದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಯಾವುದೇ ಕಾರಣಕ್ಕೂ ಸಿಧು ಅವರಿಗೆ ಗೆಲ್ಲಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಹಾಗೂ ಒಆಕಿಉಸ್ತಾನದ ವಿಚಾರದಲ್ಲಿ ಸಿಧು ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯದ ಸ್ಥಿತಿ ನೋಡಿದರೆ ಅದು ನಿಜವಾಗುವಂತೆ ತೋರುತ್ತಿದೆ.
ಆಪ್‍ನಿಂದ ಸರ್ಧಿಸಿದ್ದ ಜೀವನ್ ಜ್ಯೋತ್ ಕೌರ್ ಮುನ್ನಡೆಯಲ್ಲಿದ್ದರೆ, ಶಿರೋಮಣಿ ಅಕಾಲಿ ದಳದ ಬಿಕ್ರಾಂ ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ.ಬೆಳಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ ಆಪ್ 89, ಕಾಂಗ್ರೆಸ್ 13, ಶಿರೋಮಣಿ ಅಖಾಲಿ ದಳ 13, ಬಿಜೆಪಿ 5, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಒಟ್ಟು 117 ಸ್ಥಾನಗಳ ಪೈಕಿ ಬಹುಮತಕ್ಕೆ 59 ಸ್ಥಾನಗಳ ಬೇಕಾಗುತ್ತದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02 ಸ್ಥಾನಗಳಲ್ಲಿ ಜಯಗಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ