ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ: ನೋಟಾಕ್ಕೆ ಬಿದ್ದ ಮತಗಳು 12 ಪಕ್ಷಗಳಿಗಿಂತ ಹೆಚ್ಚು ಮತಗಳು..!

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಸಂಗತಿಯಲ್ಲಿ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಪಡೆದ ಮತಗಳಿಗಿಂತ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ‘ನೋಟಾ’ ವೇ ಹೆಚ್ಚಿನ ಮತಗಳನ್ನು ಗಳಿಸಿದೆ…!
ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಪ್ರಕಾರ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನೋಟಾ (ಮೇಲಿನ ಯಾವುದೂ ಅಲ್ಲ) ಮತ ಹಂಚಿಕೆಯು ಶೇಕಡಾ 0.69 ರಷ್ಟಿತ್ತು. ಇದು ಎಎಪಿ (ಶೇ. 0.35) ಮತ್ತು ಜೆಡಿ-ಯು (ಶೇ. 0.11). ಮತಗಳ ಪಾಲನ್ನು ಮೀರಿಸಿದೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಮತ ಹಂಚಿಕೆಯು ಶೇಕಡಾ 0.47 ರಷ್ಟು ದಾಖಲಾಗಿದೆ.

ಸಿಪಿಐನ ಮತಗಳ ಪ್ರಮಾಣವು ಶೇಕಡಾ 0.07 ರಷ್ಟಿದ್ದರೆ, ಎನ್‌ಸಿಪಿಯ ಮತಗಳ ಪ್ರಮಾಣವು ಶೇಕಡಾ 0.05 ರಷ್ಟಿತ್ತು. ಶಿವಸೇನೆಯ ಮತಗಳಿಕೆ ಶೇ.0.03.
ಸಿಪಿಐ(ಎಂ), ಸಿಪಿಐ(ಎಂಎಲ್) ಮತ್ತು ಎಲ್‌ಜೆಪಿ(ಆರ್‌ವಿ) ಮತಗಳ ಪಾಲು ಶೇ.0.01ರಷ್ಟಿದೆ. ಎಐಎಫ್‌ಬಿ, ಐಯುಎಂಎಲ್ ಮತ್ತು ಎಲ್‌ಜೆಪಿ ಯಾವುದೇ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರ ಮತಗಳ ಪಾಲು ಶೇಕಡಾ 0.00 ರಷ್ಟಿದೆ ಎಂದು ಇಸಿಐ ವೆಬ್‌ಸೈಟ್ ತಿಳಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಬಿಜೆಪಿಯ ಮತಗಳು ಶೇ.41.6ರಷ್ಟಿದ್ದರೆ, ಸಮಾಜವಾದಿ ಪಕ್ಷದ (ಎಸ್‌ಪಿ) ಮತಗಳ ಪ್ರಮಾಣ ಶೇ.32ರಷ್ಟಿದೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮತ ಹಂಚಿಕೆ ಶೇ.12.8 ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಶೇ.3.02 ರಷ್ಟಿದೆ. ಕಾಂಗ್ರೆಸ್ ಶೇ.2.38 ರಷ್ಟು ಮತಗಳನ್ನು ಪಡೆದಿದೆ.
2017 ರಲ್ಲಿ, ಬಿಜೆಪಿ 312 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳಾದ ಅಪ್ನಾ ದಳ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (SBSP) ಕ್ರಮವಾಗಿ ಒಂಬತ್ತು ಮತ್ತು ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ 47, ಬಿಎಸ್‌ಪಿ 19, ಕಾಂಗ್ರೆಸ್ 7 ಮತ್ತು ಇತರರು ಐದು ಸ್ಥಾನಗಳನ್ನು ಪಡೆದಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement