ಕುಮಟಾ: ಟಿ.ಡಿ.ಕಾಮತ್‌ ನಿಧನ

ಕುಮಟಾ: ಮೂಲತಃ ಕುಮಟಾದವರಾದ ಹಾಲಿ ಮುಂಬೈ ನಿವಾಸಿಯಾಗಿದ್ದ ಟಿ.ಡಿ.ಕಾಮತ್‌ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಕುಮಟಾದ ಪ್ರಸಿದ್ಧ ಜವಳಿ ವ್ಯಾಪಾರಿ ಡಿ.ಟಿ. ಕಾಮತ್‌ ಅವರ ಪುತ್ರರಾಗಿದ್ದರು.
ಅಶೋಕ ಲೇಲ್ಯಾಂಡ್‌ ಸೇರಿದಂತೆ ಹಲವು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಟಿ.ಡಿ.ಕಾಮತ್‌ ಕುಮಟಾದ ಗಂಧರ್ವ ಕಲಾಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕುಮಟಾ ಡಾ.ಎ.ವಿ.ಬಾಳಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಣಿಯಲ್ಲಿದ್ದರು. ಅಲ್ಲದೆ ಅನೇಕ ಕಂಪನಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಶೋಕ ಲೇಲ್ಯಾಂಡ್‌ ಕಂಪನಿ ಸೇರಿದ್ದ ಟಿ.ಡಿ.ಕಾಮತ್‌ ಅವರು ನಂತರ ಅಲ್ಲಿ ಡೆಪ್ಯುಟಿ ಜೆನರಲ್‌ ಮ್ಯಾನೇಜರ್‌ ಹುದ್ದೆ ವರೆಗೆ ಕಾರ್ಯನಿರ್ವಹಿಸಿ ನಂತರ ನಿವೃತ್ತಿಯಾದರು. ನಿವೃತ್ತಿ ನಂತರಯುನಿಟಿ ಇನ್ಫ್ರಾ ಪ್ರಾಜೆಕ್ಟ್‌ ಕಂಪನಿಯ ಜೆನರಲ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದರು. ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪದಲ್ಲಿ ಸುನಾಮಿಯಿಂದ ಹಾನಿಗೊಳಗಾದವರಿಗೆ ಸುಮಾರು175 ಕೋಟಿ ರೂ.ಗಳ 5000 ಮನೆಗಳ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ದೆಹಲಿಯ ಇಂಡಿಯಾ ಗೇಟ್‌ ಬಳಿಯ 140 ಕೋಟಿ ರೂ.ಗಳ ವೆಚ್ಚದಲ್ಲಿ ಧ್ಯಾನಚಂದ ಸ್ಟೇಡಿಯಂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರಿನ ಕಾಮತ್‌ ಗ್ರುಪ್‌ ಆಫ್‌ ಹೊಟೆಲ್ಸ್‌ನ ಟೆಕ್ನಕಲ್‌ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಸಂತಾಪ: ಟಿ.ಡಿ.ಕಾಮತ್‌ ಅವರ ನಿಧನಕ್ಕೆ ಕುಮಟಾ ಗಂಧರ್ವ ಕಲಾ ಕೇಂದ್ರ ಸಂತಾಪ ಸೂಚಿಸಿದೆ. ಗಂಧರ್ವ ಕಲಾ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement