ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮಧ್ಯರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮದ್​ಗೆ (JEM) ಸೇರಿದ ಉಗ್ರರು ಸೇರಿದಂತೆ ನಾಲ್ವರನ್ನು ಕೊಂದುಹಾಕಿವೆ.

ಪುಲ್ವಾಮಾದ ಚೆವ್​ಕ್ಲಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ. ಭದ್ರತಾ ಪಡೆಗಳು ಗಂಡೆರ್​ಬಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಯಾಬಾ (LeT) ಸಂಘಟನೆಯ ಮತ್ತೋರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹಂದ್ವಾರಾದ ನೆಚಮ ಪ್ರದೇಶದಲ್ಲಿ ಮತ್ತೋರ್ವ ಎಲ್​ಇಟಿ ಉಗ್ರ ಹತನಾಗಿದ್ದಾನೆ. ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚಾಲ್ತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂದ್ವಾರದ ನೆಚಮ, ರಾಜ್ವಾರ್ ಪ್ರದೇಶದಲ್ಲಿ ಎನ್​ಕೌಂಟರ್ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಶೀಘ್ರ ಲಭ್ಯವಾಗಲಿದೆ’ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಭದ್ರತಾ ಪಡೆಗಳು ಕಾಶ್ಮೀರದ ಐದು ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಕಾರ್ಯಾಚರಣೆಯಲ್ಲಿ ಇಬ್ಬರು ಜೈಶ್-ಎ-ಮೊಹಮದ್ ಉಗ್ರರು ಹಾಗೂ ಇಬ್ಬರು ಎಲ್​ಇಟಿ ಉಗ್ರರನ್ನು ಕೊಲ್ಲಲಾಗಿದೆ. ಒಬ್ಬ ಉಗ್ರನನ್ನು ಬಂಧಿಸಲಾಗಿದೆ. ಹಂದ್ವಾರ ಮತ್ತು ಪುಲ್ವಾಮಾದ ಎನ್​ಕೌಂಟರ್​ಗಳು ಮುಕ್ತಾಯವಾಗಿವೆ ಎಂದು ಕಾಶ್ಮೀರದ ಐಜಿಪಿ ವಿಜಯ್​ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಮತ್ತು ಸಿಖ್ಖ್ ಸಮುದಾಯಕ್ಕೆ ಸೇರಿದ ನಾಗರಿಕರ ಹತ್ಯೆಯಲ್ಲಿ ಉಗ್ರರು ತೊಡಗಿಸಿಕೊಂಡ ನಂತರ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement