ನವದೆಹಲಿ: ಸಂಯುಕ್ತ ಜನತಾದಳದ (ಜೆಡಿಯು) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ಸಂಸತ್ ಸದಸ್ಯರಾಗಿದ್ದಾಗ ಮಂಜೂರು ಮಾಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ರಾಜ್ಯಸಭಾ ಸ್ಥಾನದಿಂದ ತಾವು 2017ರಲ್ಲಿ ಅನರ್ಹಗೊಂಡಿದ್ದ ಪ್ರಕರಣ ಇತ್ಯರ್ಥವಾಗುವ ವರೆಗೆ ಮನೆ ತೆರವುಗೊಳಿಸುವುದಿಲ್ಲ ಎಂದು ಶರದ್ ಯಾದವ್ ವಾದಿಸಿದ್ದರು. ಆದರೆ ʼಸದನದಿಂದ ಅನರ್ಹಗೊಂಡ ಬಳಿಕ ಅಧಿಕಾರದೊಂದಿಗೆ ದೊರೆತ ಸೌಲಭ್ಯವನ್ನು ಮುಂದುವರೆಸಲಾಗದು ಎಂದು ತಿಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ 15 ದಿನದೊಳಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ..
ಅರ್ಜಿದಾರರು ಅನರ್ಹಗೊಂಡಿದ್ದು ರಾಜ್ಯಸಭಾ ಸದಸ್ಯರಾಗಿ ಯಾವುದೇ ಕರ್ತವ್ಯಗಳನ್ನು ನಿರ್ವಹಿಸುವ ಅಗತ್ಯವಿಲ್ಲವಾದ್ದರಿಂದ ಅಧಿಕೃತ ನಿವಾಸವನ್ನು ಉಳಿಸಿಕೊಳ್ಳುವ ಯಾವುದೇ ಸಮರ್ಥನೆ ಇಲ್ಲ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ