ಉಕ್ರೇನ್‍ನಲ್ಲಿ ಸಾವಿಗೀಡಾದ ನವೀನ್ ಪಾರ್ಥೀವ ಶರೀರ ಭಾನುವಾರ ಬೆಂಗಳೂರಿಗೆ

ಬೆಂಗಳೂರು: ರಷ್ಯಾ-ಉಕ್ರೇನ್​ ಯುದ್ಧದ ವೇಳೆ ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ಭಾನುವಾರ ಮುಂಜಾನೆ 3.30ಕ್ಕೆ ಆಗಮಿಸಲಿದೆ.
ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನವೀನ್‌ ಮೃತದೇಹ ಆಗಮಿಸಲಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಕ್ರೇನ್ ನಲ್ಲಿ ರಷ್ಯಾದ ಶೆಲ್‌ ದಾಳಿಗೆ ಮೃತಪಟ್ಟ ನವೀನ್ ಪಾರ್ಥಿವ ಶರೀರ ತವರಿಗೆ ತರಲಾಗುತ್ತದೆ. ಭಾನುವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಏರ್ ಪೋರ್ಟ್ ಗೆ ಬರಲಿದೆ. ಅಲ್ಲಿಂದ ಪಾರ್ಥಿವ ಶರೀರವನ್ನ ಹಾವೇರಿಗೆ ರವಾನಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರ ದಾನ: ನವೀನ್ ತಂದೆ
ಮಗನ ಪಾರ್ಥಿವ ಶರೀರ ಬರುವುದು ವಿಳಂಬವಾಗಿದ್ದರಿಂದ ಕುಟುಂಬಸ್ಥರಿಗೆ ನಿರಾಸೆಯಾಗಿತ್ತು. ಈಗ ಮಗನ ಪಾರ್ಥಿವ ಶರೀರ ಬರುವ ಮಾಹಿತಿ ಅವರಿಗೆ ಸಿಕ್ಕಿದೆ. ಮೃತದೇಃವನ್ನು ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರಕಿದ್ದು, ಪಾರ್ಥಿವ ಶರೀರ ಮನೆಗೆ ಬಂದ ನಂತರ, ಮನೆಯಲ್ಲಿ ಪೂಜೆ ಸಲ್ಲಿಸಿ, ದಾವಣೆಗೆರೆ ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರವನ್ನು ದಾನ ಮಾಡಲಾಗುವುದು ಎಂದು ನವೀನ್ ತಂದೆ ಶೇಖರಗೌಡ ತಿಳಿಸಿದ್ದಾರೆ ಎಂದು ಟಿವಿ9 ಕನ್ನಡ.ಕಾಮ್‌ ವರದಿ ಮಾಡಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಖಾರ್ಕೀವ್ ನಲ್ಲಿ ನಾಲ್ಕನೆ ವರ್ಷದ ಎಂಬಿಬಿಎಸ್ ಓದುತ್ತಿದ್ದ. ನವೀನ್ ಸೂಪರ್ ಮಾರ್ಕೆಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ರಷ್ಯಾ ಶೆಲ್ ದಾಳಿಯಿಂದಾಗಿ ದುರ್ಮರಣಕ್ಕೀಡಾಗಿದ್ದ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement