ಭಗವದ್ಗೀತೆ ಓದಿ ಭಯೋತ್ಪಾದಕರಾದ ಉದಾಹರಣೆ ಇಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು : ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ, ಬದಲಾಗಿ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಈ ಗ್ರಂಥವು ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ಭಗವದ್ಗೀತೆ ಓದಿ ಭಯೋತ್ಪಾದಕರಾದ ಉದಾಹರಣೆ ಇಲ್ಲ ಎಂದು ತಿಳಿಸಿದರು.

ಭಗವದ್ಗೀತೆ ಯಾರಿಗೂ ಪ್ರಚೋದನೆ ನೀಡುವುದಿಲ್ಲ, ಬದಲಾಗಿ ಪ್ರೇರಣೆ ನೀಡುತ್ತದೆ. ಭಗವದ್ಗೀತೆ ಮಾಹಾತ್ಮಾ ಗಾಂಧೀಜಿಗೆ ಅವರಿಗೆ ಪ್ರೇರಣೆ ನೀಡಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೂ ಭಗವದ್ಗೀತೆ ಪ್ರೇರಣೆ ನೀಡಿದೆ ಎಂದರು.
ಕಾಶ್ಮೀರಿ ಫೈಲ್ಸ್ ವಾಸ್ತವಿಕ ಸತ್ಯದ ಘಟನೆಗಳನ್ನು ಆಧರಿಸಿದ ಚಲನಚಿತ್ರ. ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳಿವೆ. ಸಿದ್ದರಾಮಯ್ಯ ಅವರು ವಕೀಲರಿದ್ದಾರೆ, ಬುದ್ಧಿವಂತರಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಟೀಕಿಸಿದರು.

ದೇಶಾದ್ಯಂತ ಎಲ್ಲಾ ಪುಸ್ತಕದಲ್ಲಿ ರಾಮಾಯಣ-ಮಹಾಭಾರತದ ಅಂಶಗಳು ಬಂದರೆ ಧರ್ಮದ ಆಧಾರದಲ್ಲಿ ದೇಶ ಉಳಿಯುತ್ತದೆ ಎಂದು ಡಿ.ಎನ್.ಜೀವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಓದಿರುವ ಪುಸ್ತಕದಲ್ಲಿ ಲಾರ್ಡ್ ವೆಲ್ಲೆಸ್ಲಿ, ಕರ್ಜನ್‍ ಮೊದಲಾದವರ ಬಗ್ಗೆಯೇ ಬರೆಯಲಾಗಿತ್ತು. ಅವರು ಈ ದೇಶಕ್ಕೆ ಬಂದ ಆಕ್ರಮಣಕಾರರು. ಅವರ ಬಗ್ಗೆ ಇನ್ನೂ ನಮ್ಮ ಮಕ್ಕಳಿಗೆ ಹೇಳಿಕೊಡುವುದನ್ನು ಬಿಟ್ಟು ಬದುಕಲು ಕಲಿಸಬೇಕು ಎಂದು ಸಿ. ಟಿ. ರವಿ ತಿಳಿಸಿದರು.
ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹದ ಮನಸ್ಥಿತಿಗೆ ಇದು ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ಸತ್ಯದ ವಿವೇಚನೆಗೆ ಒಳಗಾಗುತ್ತಾರೆ ಎಂದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement