ದೇಶದ ಜನತೆಗೆ ಭಗವದ್ಗೀತೆ, ರಾಮಾಯಣ-ಮಹಾಭಾರತ ತಲುಪಿಸಿದ್ದೆ ಕಾಂಗ್ರೆಸ್: ಬಿಜೆಪಿಗೆ ಡಿಕೆಶಿ ತಿರುಗೇಟು

ಮೈಸೂರು: ಇಡೀ ದೇಶದ ಜನತೆಗೆ ದೂರದರ್ಶನದ ಮೂಲಕ ಭಗವದ್ಗೀತೆ ತಲುಪಿಸಿರುವುದು ಕಾಂಗ್ರೆಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನಾವು ಸಹ ಹಿಂದೂಗಳೇ ಎಂದು ಹೇಳಿದ್ದಾರೆ.

ರಾಜೀವ್ ಗಾಂಧಿಯವರು ರಾಮಾಯಣ, ಮಹಾಭಾರತವನ್ನು ದೇಶದ ಜನತೆ ತೋರಿಸಿದ್ದಾರೆ. ದೂರದರ್ಶನದ ಮೂಲಕ ಜನರಿಗೆ ಭಗವದ್ಗೀತೆ ತಲುಪುವಂತೆ ಮಾಡಿದರು. ನಾವು ಕೂಡ ಹಿಂದೂಗಳೇ, ಭಗವದ್ಗೀತೆ ಶಿಕ್ಷಣದಲ್ಲಿ ಅಷ್ಟೇ ಅಲ್ಲ, ಇಡೀ ದೇಶದ ಜನತೆಗೆ ತಲುಪುವಂತೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಲಿದೆ ಎಂಬ ಆರ್‌ಎಸ್‌‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಭಾಕರ ಭಟ್ ಬಿಜೆಪಿಯಲ್ಲಿ ಯಾರು? ಏನು ಅಂತ ಗೊತ್ತಿಲ್ಲ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement