ಬೆದರಿಕೆ : ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರಿಗೆ ‘ವೈ’ ಕೆಟಗರಿ ಭದ್ರತೆ

ಬೆಂಗಳೂರು : ಹಿಜಾಬ್ ತೀರ್ಪು ನೀಡಿದ ಎಲ್ಲಾ ಮೂವರು ನ್ಯಾಯಾಧೀಶರಿಗೆ ‘ವೈ’ ಕೆಟಗರಿ ಭದ್ರತೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಬೊಮ್ಮಾಯಿ, ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಠಾಣೆ ಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಒಂದು ವ್ಯವಸ್ಥೆಗೆ ಬೆದರಿಕೆ ಹಾಕುವ ಕೆಲಸ ಆಗಿದೆ. ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲು ಎಲ್ಲ ಅವಕಾಶವಿದ್ದರೂ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ತಮಿಳುನಾಡಿನಲ್ಲಿಯೂ ಬೆದರಿಕೆ ವಿರುದ್ಧ ಪ್ರಕರಣ ದಾಖಲಾಗಿದೆ. ವ್ಯವಸ್ಥೆ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆಯುತ್ತಿದ್ದು, ಅದನ್ನು ದಮನ ಮಾಡಬೇಕಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಬಾರ್ ಕೌನ್ಸಿನಲನವರು ದೂರು ನೀಡಿದ್ದಾರೆ. ನಾನು ಪೊಲೀಸರಿಗೆ ಸೂಚನೆ ನೀಡಿದ್ದು, ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಘಟನೆ ನಡೆದು ಮೂರು ದಿನ ಆಗಿದೆ. ಆದರೂ ಜ್ಯಾತ್ಯತೀತವಾದಿಗಳೆಂದು ಹೇಳಿಕೊಳ್ಳುವವರು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಒಂದು ವರ್ಗದ ಜನರನ್ನು ಹೆಚ್ಚು ಈಲೈಕೆ ಮಾಡುವುದು ಮಾಡುವುದೇ ಕೋಮುವಾದ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದ ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಶೇ.70.03 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? ಇಲ್ಲಿದೆ ವಿವರ..

ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗವಲ್ಲ’ ಎಂದು ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌, ನ್ಯಾ. ಖಾಜಿ ಜೈಬುನ್ನಿಸಾ ಅವರಿಗೆ ತಮಿಳುನಾಡಿನ ಮಧುರೈಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡು ತೌಹೀದ್‌ ಜಮಾತ್‌(ಟಿಎನ್‌ಟಿಜೆ) ಸಂಘಟನೆಯ ನಾಯಕ ಕೊವಾಯಿ ಆರ್‌. ರೆಹಮತುಲ್ಲಾ, ಟಿಎನ್‌ಟಿಜೆ ಮಧುರೈ ಜಿಲ್ಲಾ ನಾಯಕ ಅಸಾನ್‌ ಬಾತ್‌ಶಾ ಹಾಗೂ ಉಪ ಕಾರ್ಯದರ್ಶಿ ಹಬೀಬುಲ್ಲಾ ವಿರುದ್ಧ ಐಪಿಸಿಯ 5 ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement