ಹೋಳಿ ಹಬ್ಬದ ದಿನ ನೀರಿನಿಂದ ತುಂಬಿದ ಬಲೂನ್ ತಾಗಿ ಆಟೊವೇ ಪಲ್ಟಿ…ದೃಶ್ಯ ವೀಡಿಯೊದಲ್ಲಿ ಸೆರೆ

ಬಾಗಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವದಲ್ಲಿ, ಚಲಿಸುತ್ತಿದ್ದ ಆಟೋಗೆ ನೀರಿನಿಂದ ತುಂಬಿದ ಬಲೂನ್‌ನಿಂದ ಹೊಡೆದಿದ್ದರಿಂದ ಆಟೋ ಪಲ್ಟಿಯಾಗಿದೆ.
ಆಟೋ ಪಲ್ಟಿಯಾದಾಗ ಆಟೋದಲ್ಲಿ ಸವಾರರಿದ್ದರು ಎಂದು ಹೇಳಲಾಗಿದೆ. ಸದ್ಯ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಈ ಘಟನೆಯು ಬಾಗ್‌ಪತ್‌ನ ದೆಹಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ನಡೆದಿದೆ. ಹೋಳಿ ಆಡುತ್ತಿದ್ದ ವೇಳೆ ಯುವಕರು ನೀರು ತುಂಬಿದ ಬಲೂನ್ ಅನ್ನು ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ಮೇಲೆ ಎಸೆದಿದ್ದು, ಪರಿಣಾಮ ಆಟೋ ಹೆದ್ದಾರಿ ಮಧ್ಯೆಯೇ ಪಲ್ಟಿಯಾಗಿದೆ.

ಆಟೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಘಟನೆ ನಡೆದಾಗ ಹಿಂದಿನಿಂದ ಯಾವುದೇ ದೊಡ್ಡ ವಾಹನ ಬರುತ್ತಿರಲಿಲ್ಲ . ಬಲೂನ್‌ ಎಸೆದಾಕ್ಷಣ ಆಟೋ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅಜಿತ್ ಎಂಬ ಯುವಕನ ಫೇಸ್‌ಬುಕ್ ಐಡಿಯಿಂದ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಕೊತ್ವಾಲಿ ನಗರ ಕಾಠಾ ಗ್ರಾಮಕ್ಕೆ ಸಂಬಂಧಿಸಿದ್ದಾಗಿದೆ ಎನ್ನಲಾಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement