ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ಗೆ ಏ.4ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎನ್‌ಸಿಪಿ ನಾಯಕ, ಸಚಿವ ನವಾಬ್ ಮಲಿಕ್ ಗೆ ನ್ಯಾಯಾಂಗ ಬಂಧನವನ್ನು ಏಪ್ರಿಲ್ 4ರ ವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ.
ನವಾಬ್ ಮಲಿಕ್ ಅವರಿಗೆ ಬೆನ್ನುನೋವಿನ ಕಾರಣ ಮನವಿ ಮೇರೆಗೆ ಹಾಸಿಗೆ, ಕುರ್ಚಿ ಮತ್ತು ಚಾಪೆಗಳ ಬಳಕೆಗೆ ಅನುಮತಿ ನೀಡಿದೆ.

ಮನೆ ಆಹಾರಕ್ಕಾಗಿ ಅವರ ಅರ್ಜಿಯನ್ನು ನ್ಯಾಯಾಲಯವು ಬಾಕಿ ಉಳಿಸಿಕೊಂಡಿದೆ ಮತ್ತು ಮುಂದಿನ ವಿಚಾರಣೆಯ ದಿನಾಂಕದಂದು ಇದನ್ನು ನಿರ್ಧರಿಸಲಿದೆ.
ಫೆಬ್ರವರಿ 23 ರಂದು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನವಾಬ್ ಮಲಿಕ್‌ ಅವರನ್ನ ಇಡಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಮಾರ್ಚ್ 3 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿತ್ತು. ನಂತರದ ವಿಚಾರಣೆಯನ್ನು ಮತ್ತೆ ವಿಸ್ತರಿಸಿ, ಮಾರ್ಚ್ 21 ರವರೆಗೆ ಕಸ್ಟಡಿಗೆ ನೀಡಲಾಗಿತ್ತು.

ಮಲಿಕ್ ಅವರ ಕಸ್ಟಡಿ ಅಂತ್ಯಗೊಳ್ಳುತ್ತಿದ್ದಂತೆ ಇಂದು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಕೋರ್ಟ್‌ ಏಪ್ರಿಲ್ 4 ರವರೆಗೆ ಕಸ್ಟಡಿ ವಾಸ ವಿಸ್ತರಿಸಿ ಆದೇಶಿಸಿದೆ.
ಕಳೆದ ವಾರ, ಬಾಂಬೆ ಹೈಕೋರ್ಟ್ ಮಲಿಕ್‌ಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು ಮತ್ತು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲು ಆದೇಶ ನೀಡಲು ಸಹ ನಿರಾಕರಿಸಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement