ಧಾರವಾಡ: ಕರ್ನಾಟಕದ ಪ್ರತಿಷ್ಠಿತ ರಂಗಸಂಸ್ಥೆಗಳಲ್ಲಿ ಒಂದಾದ ಅಭಿನಯ ಭಾರತಿ ಪ್ರತಿವರ್ಷದಂತೆ ಈ ಬಾರಿಯೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಧಾರವಾಡ ದ ರಂಗಾಯಣ ಆವರಣದಲ್ಲಿರುವ ಸಂಸ್ಕೃತಿ ಸಮುಚ್ಚಯ ಸಭಾಗೃಹದಲ್ಲಿ ಆಚರಿಸಲಿದೆ. ಈ ಬಾರಿ ಧಾರವಾಡದ ರಂಗಾಯಣವೂ ಅಭಿನಯ ಭಾರತೀಯಜೊತೆ ಕೈಗೂಡಿಸಿದ್ದು ಸಂಯುಕ್ತ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ
ನಿರಂತರ 24 ತಾಸುಗಳ ಮ್ಯಾರಥಾನ್ ರಂಗ ಚಟುವಟಿಕೆಗಳ ಮೂಲಕ ಫೇಸ್ಬುಕ್ ಲೈವ್ ಶೋ ವಿಶ್ವ ರಂಗಭೂಮಿ ದಿನಾಚರಣೆಯ ಈ ಬಾರಿಯ ವಿಶೇಷ ಹಾಗೂ ವಿನೂತನ ಪ್ರಯತ್ನವಾಗಿದೆ. ಇಡೀ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರಂತರ 24 ತಾಸುಗಳ ರಂಗ ಚಟುವಟಿಕೆಗ ಫೇಸ್ಬುಕ್ ಲೈವ್ ಶೋ ನಡೆಯುತ್ತಿದೆ. ಮಾರ್ಚ್ 26ರಂದು ಮಧ್ಯಾಹ್ನ 1ಕ್ಕೆ ಆರಂಭವಾಗಿ ಮಾರ್ಚ್ ಮಾರ್ಚ್ 27ರಂದು ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಧಾರವಾಡ ರಂಗಾಯಣವೂ ಕೈಜೋಡಿಸಿದೆ ಎಂದು ಅಭಿನಯ ಭಾರತಿ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.
ಈ ವಿಶೇಷ 24 ತಾಸುಗಳ ರಂಗ ಚಟುವಟಿಕೆಗ ಫೇಸ್ಬುಕ್ ಲೈವ ಶೋಕ್ಕೆ ಚಾಲನೆ ನೀಡಿ ಪ್ರಥಮವಾಗಿ ಮಾತನಾಡುವವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಆರ್. ಭೀಮಸೇನ್ ಅವರು. ಉಪನ್ಯಾಸ, ನೃತ್ಯ ,ಚಿತ್ರಕಲೆ, ರಂಗಗೀತೆ, ಅಭಿನಯ, ಯಕ್ಷಗಾನ , ಅಂತಾಷ್ಟ್ರೀಯ ಥಿಯೇಟರ್ ಇನ್ಸ್ಟಿಟ್ಯೂಟ್ ನ ರಂಗ ಶ್ರೇಷ್ಠರು ಪಾಲ್ಗೊಳ್ಳಲಿದ್ದಾರೆ.
24 ತಾಸುಗಳ ಪ್ರಥಮ ಮ್ಯಾರಥಾನ್ ಫೇಸ್ಬುಕ್ ಲೈವ್ ಕಾರ್ಯಕ್ರಮ ಮಾರ್ಚ್ 26ರಂದು ಮಧ್ಯಾಹ್ನ 1ಕ್ಕೆ ಆರಂಭವಾಗಿ ಮಾರ್ಚ್ ಮಾರ್ಚ್ 27ರಂದು ಮಧ್ಯಾಹ್ನ 1ರ ವರೆಗೆ ನಡೆಯಲಿದ್ದು ಭಾರತ, ಅಮೆರಿಕ, ಐರ್ಲ್ಯಾಂಡ್ ದೇಶಗಳು ಭಾಗವಹಿಸುತ್ತವೆ ಎಂದು ತಿಳಿಸಲಾಗಿದೆ. ಕಲಬುರ್ಗಿ ರಂಗಾಯಣದ ಲೈವ್ ನಾಟಕ, ಉಪನ್ಯಾಸಗಳು, ನಾಟಕ ವಾಚನ, ನೃತ್ಯ, ಚಿತ್ರಕಲೆ ಜುಗಲ್ಬಂದಿ, ದೀರ್ಘ ಸ್ವಗತಗಳು, ಅನುಭವ ಕಥನ
ರಂಗ ಗೀತೆಗಳು ಸಂದೇಶವಾಚನ ಪ್ರಶಸ್ತಿ ವಿತರಣೆ ಎಲ್ಲ ಇರಲಿವೆ. ಪ್ರತಿ ಗಂಟೆಯ ವಿವರಗಳನ್ನು ಫೇಸ್ಬುಕ್‌ನಲ್ಲಿ ನೋಡಬಹುದು ಎಂದು ಹೇಳಲಾಗಿದೆ.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಿರಂತರ ಮ್ಯಾರಥಾನ್ 24 ತಾಸುಗಳ ಫೇಸ್ಬುಕ್ ಲೈವ್ ಕಾರ್ಯಕ್ರಮ , ಲೈವ್ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ್, ಶಿಲ್ಪ ಖಡಕ್ಭಾವಿ, ವಿ.ಟಿ. ನಾಯಕ, ಪುಣೆಯ ಕನ್ನಡಿಗರು ( 3 ತಾಸು), ಸುಜಯ ಶಾನಭೋಗ್ 90 ನಿಮಿಷಗಳ ನೃತ್ಯ, ದತ್ತಾತ್ರೇಯ ಕುರಹಟ್ಟಿ ರಂಗಗೀತೆ, ಕಲಬುರ್ಗಿ ರಂಗಾಯಣದ ಲೈವ್ ನಾಟಕ, ಪ್ರಭಾಕರ್ ಜೋಶಿ ( ರಂಗಭೂಮಿ ಮೂಲಕ ಗ್ರಾಮೀಣಾಭಿವೃದ್ಧಿ) ಅವರಿಂದ ಮಾತು, , ಬಗೈರ್ ಹುಕುಂ ನಾಟಕ, ರಾಜಾರಾಮ್, ಹರ್ಷ್ ಡಂಬಳ, ರಾಜಾ ಆಚಾರ್, ಜ್ಯೋತಿ ದೀಕ್ಷಿತ್, ಅರವಿಂದ್ ಕುಲಕರ್ಣಿ, ಡಾ. ವಂಶಾಕ್ರತಮಠ, ವಲ್ಲೀಶ ಶಾಸ್ತ್ರಿ ನಾವಿಕ್( ಅಮೆರಿಕ 4 ತಾಸು) ಮನೋಹರ ನಾಯಕ್, ವಿಶ್ವ ಪ್ರತಿಷ್ಠಾನ ಉಡುಪಿ (2 ತಾಸು) ವಿಭಾ ಪುರೋಹಿತ, ಡಾ. ಕೃಷ್ಣ ಕಟ್ಟಿ, ಶಾಂತವೀರಪ್ಪ ಪೂಜಾರ ಮತ್ತು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ನಂತರ ಮಾರ್ಚ್ 27ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಸಂಸ್ಕೃತಿ ಸಮುಚ್ಚಯ ಸಭಾಗೃಹದಲ್ಲಿ ಸಂಂಸ್ಥೆಯು ನೀಡುವ ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಡಾ. ಶ್ರೀಪಾದ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಡಾ. ವಿಜಯ್ ನಳಿನಿ ರಮೇಶ,ವಿಜಯ ಕರ್ನಾಟಕ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಡಾ.ಬಂಡು ಕುಲಕರ್ಣಿ, ಶಿಕ್ಷಣ ತಜ್ಞ ಗಿರೀಶ್ ದೊಡ್ಡಪ್ಪಗೌಡ ಚನ್ನಪ್ಪ ಗೌಡರ ಪಾಲ್ಗೊಳ್ಳಲಿದ್ದಾರೆ. ಧಾರವಾಡದ ರಂಗಾಯಣ ನಿರ್ದೇಶಕ ರಮೇಶ್ ಪರ್ವಿನಾಯ್ಕರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭಿನಯ ಭಾರತಿ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಉಪಸ್ಥಿತಿರಿರುವರು ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ