ಬೆಳಗಾವಿ: ಉದ್ಯಮಿ ಪತಿಯ ಕೊಲೆಗೆ 10 ಲಕ್ಷ ರೂ.ಸುಪಾರಿ ನೀಡಿದ್ದ ಪತ್ನಿ…! ಮೂವರ ಬಂಧನ

ಬೆಳಗಾವಿ: ಮಾರ್ಚ್​ 15ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ನಡೆದಿದ್ದ ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಉದ್ಯಮಿ ಕೊಲೆಗೆ ಉದ್ಯಮಿಯ ಎರಡನೇ ಪತ್ನಿ ಸುಪಾರಿ ಕೊಟ್ಟಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಉದ್ಯಮದ ಪಾಲುದಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ರಾಜು ದೊಡ್ಡಬೊಮ್ಮನವರ (41) ಅವರನ್ನು ಮಂಡೋಳಿ ರಸ್ತಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಚಾಕು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಈಗ ಪ್ರಮುಖ ಮೂರು ಆರೋಪಿಗಳು ಬಂಧಿಸಲಾಗಿದೆ. ಬಂಧಿತರನ್ನು ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ  ಹಾಗೂ ಕೊಲೆಗೀಡಾದ ಉದ್ಯಮಿಯ ಎರಡನೇ ಪತ್ನಿ ಕಿರಣ ದೊಡ್ಡಬೊಮ್ಮನವರ (26) ಎಂದು ಗುರುತಿಸಲಾಗಿದೆ.ಇವರಲ್ಲದೆ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಉದ್ಯಮಿ ರಾಜು ದೊಡ್ಡಬೊಮ್ಮನವರ್ ತನ್ನ ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ ಅವರನ್ನು ಎರಡನೇ ಮದುವೆಯಾಗಿದ್ದ. ನಂತರ ವಿವಾಹವಾಗಿ ಎರಡು ಮಕ್ಕಳಾದ ಬಳಿಕ ರಾಜು ಮೂರನೇ ವಿವಾಹವಾಗಿದ್ದರು ಎನ್ನಲಾಗಿದೆ ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವಂತೆ ರಾಜುಗೆ ಕಿರಣ ಒತ್ತಾಯಿಸಿದ್ದಳು. ಆದರೆ, ಉದ್ಯಮದಲ್ಲಿ ಬಂದಂತಹ ಲಾಭವನ್ನು ಹೆಂಡತಿ ಹಾಗೂ ತನ್ನ ವ್ಯವಹಾರದ ಪಾಲುದಾರರಿಗೆ ನೀಡುತ್ತಿರಲಿಲ್ಲ ಎಂಬ ಆರೋಪವಿದೆ. ಹೀಗಾಗಿ ಪತಿಯ ಉದ್ಯಮದ ಪಾರ್ಟ್​ನರ್​ಗಳ ಜೊತೆಗೂಡಿ ಗಂಡನ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಮಾರ್ಚ್ 15ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕಾರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ರಾಜು ಅವರ ಮೇಲೆ ದಾಳಿ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಎರಡು ಕಾಲುಗಳ ಮೇಲೆ ಹಲ್ಲೆ ಮಾಡಿದ್ದರು. ತೀವ್ರ ರಕ್ತ ಸ್ರಾವವಾಗಿ ರಾಜು ಸ್ಥಳದಲ್ಲೇ ಮೃತಪಟ್ಟಿದ್ದರು.  ಮೂರು ಜನ ಸೇರಿ ರಾಜು ಕೊಲೆ ಮಾಡಲು 10 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ರಾಜು ಕೊಲೆಯಾದ ದಿನ ಅಂತ್ಯಕ್ರಿಯಲ್ಲಿ ಭಾಗವಹಿಸುವ ಮೂಲಕ ತಾನೇನು ಮಾಡೇ ಇಲ್ಲ ಎಂಬಂತೆ ಪತ್ನಿ ಕಿರಣ ನಟಿಸಿದ್ದಳು. ಆದರೆ ಪೊಲೀಸರು ಮೊಬೈಲ್‌ ಕರೆ ಆಧರಿಸಿ ಆತನ ಬಿಸಿನೆಸ್‌ ಪಾಲುದಾರರನ್ನು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement