ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಎಂ.ಎಸ್. ಧೋನಿ, ನೂತನ ನಾಯಕರಾಗಿ ರವೀಂದ್ರ ಜಡೇಜಾ ಆಯ್ಕೆ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2022 ಆರಂಭಕ್ಕೆ ಎರಡು ದಿನಗಳ ಮುಂಚಿತವಾಗಿ ಎಂ.ಎಸ್‌.ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು ತಮ್ಮ ಬದಲಿಗೆ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ತಂಡವನ್ನು ಮುನ್ನಡೆಸಲು ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಎಂ.ಎಸ್‌. ಧೋನಿ ಈ “ಋತು ಮತ್ತು ನಂತರ” ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ ಎಂದು ಸಿಎಸ್‌ಕೆ ದೃಢಪಡಿಸಿದೆ.

ಹಾಲಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 26 ರಂದು ಮುಂಬೈನಲ್ಲಿ 2021 ರ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಋತುವಿನ ಆರಂಭಿಕ ಪಂದ್ಯವನ್ನು ಆಡಲಿದೆ. ಸ್ಪಾಟ್ ಫಿಕ್ಸಿಂಗ್ ಹಗರಣವು ಸ್ಫೋಟಗೊಂಡ ನಂತರ ಸಿಎಸ್‌ಕೆ ತಂಡವನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದಾಗ, ಧೋನಿ 2016 ಮತ್ತು 2017 ರಲ್ಲಿ ರೈಸಿಂಗ್ ಸೂಪರ್‌ಜೈಂಟ್ ಅನ್ನು ಪ್ರತಿನಿಧಿಸಿದ್ದರು. 2018 ರಲ್ಲಿ ಸಿಎಸ್‌ಕೆ ಜೊತೆಗೆ, ಧೋನಿ ಐಪಿಎಲ್‌ನಲ್ಲಿ ಬ್ಯಾಟ್‌ನೊಂದಿಗೆ ತಮ್ಮ ಅತ್ಯುತ್ತಮ ಫಾರ್ಮ್‌ ಪಡೆದಿದ್ದರು ಮತ್ತು ಇದು 150.66 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 455 ರನ್ ಗಳಿಸಿ ಸಿಎಸ್‌ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿತು.ಐಪಿಎಲ್‌ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಧೋನಿ ನಾಯಕತ್ವ 4 ಪ್ರಶಸ್ತಿ ಪಡೆಯಲು ಕಾರಣವಾಯಿತು.
ರವೀಂದ್ರ ಜಡೇಜಾ 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಸದಸ್ಯರಾಗಿದ್ದಾರೆ. ಸ್ಟಾರ್ ಆಲ್‌ರೌಂಡರ್ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ ಮತ್ತು ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನಲ್ಲಿ ಅವರು 175 ರನ್ ಗಳಿಸಿ 9 ವಿಕೆಟ್‌ಗಳನ್ನು ಗಳಿಸಿ ಇತಿಹಾಸವನ್ನು ಸೃಷ್ಟಿಸಿದ್ದರು.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement