ತನ್ನ ರಕ್ತದಲ್ಲಿ ದಿ ಕಾಶ್ಮೀರ್​ ಫೈಲ್ಸ್​ ಸಿನೆಮಾ ಪೋಸ್ಟರ್​ ಬಿಡಿಸಿದ ಮಹಿಳೆ…!

ಭಾರತದಲ್ಲಿ ಹಿಂದಿ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಸೃಷ್ಟಿಸಿರುವ ಕ್ರೇಜ್ , ಮುರಿದಿರುವ ದಾಖಲೆಗಳು ಅಷ್ಟಿಷ್ಟಲ್ಲ. ಹೌದು , ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಇಡೀ ದೇಶದ ಹಾಗೂ ವಿದೇಶಗಳ ಜನರ ಗಮನ ಸೆಳೆಯುತ್ತಿದೆ. ಜೊತೆಗೆ ಈ ಸಿನಿಮಾದಲ್ಲಿ ತೋರಿಸಲಾದ ಹಲವು ಸಂಗತಿಗಳ ಬಗ್ಗೆ ಪರ – ವಿರೋಧದ ಚರ್ಚೆಗಳು ನಡೆಯುತ್ತಿವೆ . ಕಾಶ್ಮೀರ್ ಪಂಡಿತರ ಹತ್ಯೆ, ವಲಸೆ ಬಗ್ಗೆ ಕಥೆ ಹೊಂದಿರುವ ಈ ಸಿನಿಮಾ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಮಹಿಳೆಯೊಬ್ಬರು ತಮ್ಮ ರಕ್ತದಿಂದ ಈ ಸಿನಿಮಾದ ಪೋಸ್ಟರ್ ಅನ್ನು ಬಿಡಿಸಿದ್ದಾರೆ..! . ಸದ್ಯ , ಪೋಸ್ಟರ್ ಬಿಡಿಸಿರುವ ಈ ಮಹಿಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ . ರಕ್ತದಲ್ಲಿ ಕಾಶ್ಮೀರ ಫೈಲ್ಸ್‌ ಸಿನೆಮಾ ಪೋಸ್ಟರ್ ರಚಿಸಿದ ಮಹಿಳೆಯ ಹೆಸರು ಮಂಜೂ ಸೋನಿ . ಮಂಜೂ ಅವರು ತಮ್ಮ ದೇಹದಿಂದ 10 ಎಂಎಲ್ ರಕ್ತವನ್ನು ತೆಗೆದು, ಅದರಿಂದ ‘ದಿ ಕಾಶ್ಮಿರ್​ ಫೈಲ್ಸ್’ ಸಿನಿಮಾ ಪೋಸ್ಟರ್ ಅನ್ನು ಬಿಡಿಸಿದ್ದಾರೆ.

ಪೋಸ್ಟರ್ ಬಿಡಿಸಿದ ಮಹಿಳೆಯ ಫೋಟೋಗಳು ವೈರಲ್ ಆದ ಬಳಿಕ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಹ ಈ ಪರಿಯ ಪ್ರೀತಿ ಕಂಡು ಒಂದು ಕಡೆ ಶಾಕ್ ಆಗಿ ಮತ್ತೊಂದು ಕಡೆ ಆ ಮಹಿಳೆಯನ್ನು ಹೊಗಳಿದ್ದಾರೆ. ಪರಿಚಯ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ ಎಂದು ವಿವೇಕ್ ಅಗ್ನಿಹೋತ್ರಿ ಮೊದಲು ಟ್ವೀಟ್ ಮಾಡಿದ್ದಾರೆ .
ಅಲ್ಲದೆ, ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ . ಆದರೂ ಈ ರೀತಿ ಯಾರೂ ಪ್ರಯತ್ನಿಸಬಾರದು ಎಂದು ಮನವಿ ಮಾಡಿದ್ದಾರೆ. ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ ಎಂದು ಮತ್ತೆ ಟ್ವೀಟ್ ಮಾಡಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಎಲ್ಲರಿಗೂ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement