ಗ್ರಾಹಕರಿಗೆ ಶಾಕ್… ಇಂದು ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ.. ಐದು ದಿನದಲ್ಲಿ ಲೀಟರಿಗೆ 3.10 ರೂ. ಹೆಚ್ಚಳ

ನವದೆಹಲಿ: ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು (ಮಾ.26) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಪ್ರತಿ ಲೀಟರಿಗೆ ಮತ್ತೆ 80 ಪೈಸೆ ಏರಿಕೆಯಾಗಿದೆ.
ಐದು ದಿನಗಳಲ್ಲಿ ಮಾ. 24 ಒಂದು ದಿನ ಮಾತ್ರ ಇಂಧನ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಮಾರ್ಚ್​ 22 ಮತ್ತು ಮಾ.23ರಂದು ಬೆಲೆ ಏರಿಕೆಯಾಗಿತ್ತು. ಒಂದು ಮಾರ್ಚ್​ 25ರಂದು ಬೆಲೆ ಏರಿಕೆಯಾಗಿತ್ತು, ಈಗ ಮಾ.26ರಂದು ಶನಿವಾರ ಮತ್ತೆ ಬೆಲೆ ಏರಿಕೆಯಾಗಿದೆ.
ಉಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ 3.10 ರೂ.ಗಳಷ್ಟು ಇಂಧನ ದರ ಏರಿಕೆಯಾಗಿದೆ.
ಇಂದಿನ ಇಂಧನ ದರ ಈ ಕೆಳಕಂಡಂತಿದೆ

ಬೆಂಗಳೂರು
ಪೆಟ್ರೋಲ್​: ಪ್ರತಿ ಲೀಟರ್​ಗೆ 103.93 ರೂ.ಗಳು
ಡೀಸೆಲ್​: ಪ್ರತಿ ಲೀಟರ್​ಗೆ 84.14 ರೂಗಳು

ದೆಹಲಿ
ಪೆಟ್ರೋಲ್​: 98.61 ರೂ.ಗಳು
ಡೀಸೆಲ್​: 89.87 ರೂ.ಗಳು

ಮುಂಬೈ
ಪೆಟ್ರೋಲ್​: 113.35 ರೂ.ಗಳು
ಡೀಸೆಲ್​: 97.55 ರೂ.ಗಳು

ಕೋಲ್ಕತ್ತಾ:
ಪೆಟ್ರೋಲ್​: 108.01 ರೂ.ಗಳು
ಡೀಸೆಲ್​: 93.01 ರೂ.ಗಳು

ಚೆನ್ನೈ
ಪೆಟ್ರೋಲ್​: 104.43 ರೂ.ಗಳು
ಡೀಸೆಲ್​: 94.47 ರೂ.ಗಳು

137 ದಿನಗಳವರೆಗೆ ಏರಿಕೆಯಾಗದಿದ್ದ ಇಂಧನ ದರ ಪಂಚ ರಾಜ್ಯ ಚುನಾವಣೆ ನಂತರ ಮತ್ತೆ ದರ ಏರಿಕೆಯಾಗುತ್ತಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತಾರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದೆ. ಅಲ್ಲದೆ, ಅಮೆರಿಕದ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement