ತನ್ನ ಅಪ್ರಾಪ್ತ ವಿದ್ಯಾರ್ಥಿ ಜೊತೆ ಓಡಿಹೋಗಿ ಮದುವೆ ಮಾಡಿಕೊಂಡ ಶಿಕ್ಷಕಿ..! ಬಂಧನ

ತಮಿಳುನಾಡು: ಮಕ್ಕಳಿಗೆ ಪಾಠ ಮಾಡುತ್ತಾ ಬದುಕಿನ ದಾರಿ ತೋರಬೇಕಿದ್ದ ಶಿಕ್ಷಕಿಯೇ ಈಗ ಅಪ್ರಾಪ್ತನನ್ನು ಮದುವೆಯಾಗಿ ಜೈಲು ಸೇರಿದ್ದಾಳೆ…! ಅಪ್ರಾಪ್ತ ವಯಸ್ಸಿನ ತನ್ನ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿ ಬೇರೆಡೆಗೆ ಕರೆದೊಯ್ದು ದೇವಸ್ಥಾನದಲ್ಲಿ ಮದ್ವೆ ಆಗಿ ಈಗ ಕಂಬಿ ಎಣಿಸುತ್ತಿದ್ದಾಳೆ.
ಇಂತಹ ವಿಲಕ್ಷಣ ಘಟನೆ ನಡೆದಿದ್ದು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ. ಅಪ್ರಾಪ್ತ ವಿದ್ಯಾರ್ಥಿಯನ್ನ ಮದುವೆಯಾದ ಶಿಕ್ಷಕಿ ಶರ್ಮಿಳಾ, ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು.

11ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕ ಮಾರ್ಚ್​ 5ರಂದು ಕಾಲೇಜಿಗೆ ಹೋದವ ಮನೆಗೆ ವಾಪಸ್ ಬಂದಿರಲಿಲ್ಲ. ಮಗನಿಗಾಗಿ ಹಲವೆಡೆ ಹುಡುಕಾಡಿದ ಪಾಲಕರು ನಂತರ ಪೊಲೀಸ್​ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಲು ಶಾಲೆಗೆ ಬಂದಾಗ, ಮಾ.5ರಿಂದ ಅಂದರೆ ಹುಡುಗ ನಾಪತ್ತೆಯಾದ ದಿನದಿಂದಲೇ ಶಿಕ್ಷಕಿ ಶರ್ಮಿಳಾ ಎಂಬವರು ಸಹ ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಗಿದೆ.
ತಕ್ಷಣವೇ ಚುರುಕಾದ ಪೊಲೀಸರು ಶಿಕ್ಷಕಿ ಶರ್ಮಿಳಾ ಬಗ್ಗೆ ಬಾಲಕನ ಮನೆಯಲ್ಲಿ ಮಾಹಿತಿ ಕೇಳಿದರು. ಆಗ ಶಿಕ್ಷಕಿ ಜೊತೆ ಬಾಲಕ ಮನೆಯಲ್ಲಿ ಗಂಟೆಗಟ್ಟಲೇ ಫೋನ್​ನಲ್ಲಿ ಮಾತಾಡುತ್ತಿದ್ದ ಎಂಬ ಮಾಹಿತಿಯನ್ನ ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಬಾಲಕ ಮತ್ತು ಶಿಕ್ಷಕಿ ಇಬ್ಬರ ಮೊಬೈಲ್​ ಕೂಡ ಸ್ವಿಚ್ಡ್​ ಆಫ್​ ಆಗಿತ್ತು. ಹೀಗಾಗಿ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದರು. ಶಿಕ್ಷಕಿಯ ಸಂಬಂಧಿ, ಸ್ನೇಹಿತರ ಮನೆಗಳನ್ನೂ ಹುಡುಕಾಡಿದರು, ಆದರೂ ಅಸುಳಿವೂ ಸಿಕ್ಕಿರಲಿಲ್ಲ.

ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

ಪ್ರೀತಿಯ ವಿದ್ಯಾರ್ಥಿಯನ್ನು ತಂಜಾವೂರಿಗೆ ಕರೆದೊಯ್ದಿದ್ದ ಶಿಕ್ಷಕಿ ಕೆಲ ದಿನಅಲ್ಲಿದ್ದರು. ತಂಜಾವೂರಿನ ದೇವಸ್ಥಾನದಲ್ಲೇ ಬಾಲಕನ್ನು ಮದುವೆ ಆಗಿ ಸ್ನೇಹಿತೆಯ ಮನೆಯಲ್ಲಿ ತಂಗಿದ್ದಳು. ನಂತರ ತಿರುಚಿಗೆ ಬಂದು ಅಲ್ಲಿ ಒಂದು ಮನೆಯಲ್ಲಿದ್ದರು. ಆದರೆ ತನ್ನ ಹಳೇ ಸಿಮ್​ ತೆಗೆದು ಹೊಸ ಸಿಮ್​ ಹಾಕಿ ಮೊಬೈಲ್​ ಆನ್​ ಮಾಡಿದ ನಂತರ ಪೊಲೀಸರಿಗೆ ಶಿಕ್ಷಕಿ ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕಿತು. ಮಾ.24ರಂದು ಪೊಲೀಸರು ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement