ವಂಚಕಿಯ ಮದುವೆಯಾಟ: ಕೊನೆಗೂ ಪೊಲೀಸರ ಬಲೆಗೆ ಬಿದ್ದ 7 ಜನರ ಮದುವೆಯಾಗಿ ವಂಚಿಸಿದ ಮಹಿಳೆ-ಗ್ಯಾಂಗ್

ಪಾಣಿಪತ್(ಹರಿಯಾಣ): ಮದುವೆಯಾಗುವುದಾಗಿ ಯುವಕರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಪೊಲೀಸ್ ಬಲೆಗೆ ಬಿದ್ದಿದ್ದು, ಈ ಗ್ಯಾಂಗ್‌ನಲ್ಲಿ ವಧುವಿನ ಪಾತ್ರ ಮಾಡುತ್ತಿದ್ದ ಯುವತಿಯನ್ನು ಹರಿಯಾಣ ಪೊಲೀಸರು ಪಾಣಿಪತ್‌ನಲ್ಲಿ ಬಂಧಿಸಿದ್ದಾರೆ. ಈಕೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿ ನಂತರ ವಂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ವಂಚನೆಗೊಳಗಾದ ವ್ಯಕ್ತಿ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾದ ಏಳನೇ ವ್ಯಕ್ತಿ ಎಂದು ತಿಳಿದು ಬಂದಿದೆ. ಈ ಗ್ಯಾಂಗ್ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಮದುವೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿತ್ತು. ಮದುವೆಯ ದಿನ ರಾತ್ರಿ ವಧು ವರನಿಗೆ ನಿದ್ರೆ ಮಾತ್ರೆ ನೀಡಿ ಚಿನ್ನಾಭರಣ ಹಾಗೂ ನಗದು ಸಮೇತ ಪರಾರಿಯಾಗುತ್ತಿದ್ದಳು ಎಂದು ಹೇಳಲಾಗಿದೆ.

ಈ ಮಹಿಳೆ ಮದುವೆಯಾದ ನಾಲ್ಕನೇ ಪತಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆ ಏಳು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ವರನಿಗೆ ತನ್ನ ಬಗ್ಗೆ ಗೊತ್ತಾಗುವ ಮೊದಲೇ ವಧು ಲಕ್ಷಗಟ್ಟಲೆ ಹಣದೊಂದಿಗೆ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಪೊಲೀಸರು ವಂಚಿಸಿದ ಈ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 13 ರಂದು, ಮಹಿಳೆಯ ಮೂರನೇ ಪತಿ ತನಗಾದ ವಂಚನೆಯ ಬಗ್ಗೆ ತಿಳಿದುಕೊಂಡು ಮದುವೆಯ ಎಲ್ಲಾ ಪತ್ರಗಳೊಂದಿಗೆ ನೌಲ್ತಾಗೆ ತಲುಪಿ ಮಹಿಳೆಯ ನಾಲ್ಕನೇ ಪತಿಯನ್ನು ಭೇಟಿಯಾಗಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಐದನೇ ಮದುವೆಯಾಗಿದ್ದಳು. ಇದೀಗ ಶನಿವಾರ ಏಳನೇ ಮದುವೆ ಮುನ್ನೆಲೆಗೆ ಬಂದಿದೆ. ಈ ವಧು ಇನ್ನೂ ಮದುವೆಯಾಗದ ಅಥವಾ ವಿಚ್ಛೇದನ ಪಡೆದವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆಸುತ್ತಿದ್ದಳು.
ಮದುವೆಯಾದ 10 ದಿನಗಳ ನಂತರ, ಈ ಮದುವೆಯಾದ ಗಂಡನ್ನು ವರದಕ್ಷಿಣೆ ಕಿರುಕುಳ ನೀಡುತ್ತಿದ್ದೀರಿ ಎಂದು ವಧುವಿನ ತಾಯಿಯ ಮನೆಯಿಂದ ಬೆದರಿಕೆಯೊಡ್ಡುವಂತೆ ಈ ಗ್ಯಾಂಗ್‌ನ ಆರೋಪಿಗಳು ನಾಟಕ ಶುರು ಮಾಡುತ್ತಿದ್ದರು. ನಂತರ ಮದುವೆಯಾದಾತನಿಂದ ಮಹಿಳೆ ಹಣ ವಸೂಲಿ ಮಾಡುತ್ತಿದ್ದಳು. ಮೂವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿ ಈ ಗ್ಯಾಂಗ್‌ನಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement