ಇಂದು ಮತ್ತೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ..ಎಂಟು ದಿನಗಳಲ್ಲಿ ಏಳನೇ ಬಾರಿಗೆ ಹೆಚ್ಚಳ..!

ನವದೆಹಲಿ: ಇಂದು. ಮಂಗಳವಾರ ಸಹ ಪ್ರತಿ ಲೀಟರಿಗೆ ಪೆಟ್ರೋಲ್‌ 80 ಪೈಸೆ ಮತ್ತು ಡೀಸೆಲ್‌ನಲ್ಲಿ 70 ಪೈಸೆ ಹೆಚ್ಚಳದೊಂದಿಗೆ, ಒಂದು ವಾರದ ಪರಿಷ್ಕರಣೆಯ ನಂತರ ಎಂಟ ದಿನದಲ್ಲಿ ಇಂಧನ ಬೆಲೆಯಲ್ಲಿ 4.80 ರೂ.ಗಳಷ್ಟು ಹೆಚ್ಚಳವಾಗಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 100.21 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 91.47 ರೂ.ಗಳಾಗಿವೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 85 ಪೈಸೆ ಮತ್ತು 75 ಪೈಸೆ ಹೆಚ್ಚಳದೊಂದಿಗೆ, ಈಗ ಪ್ರತಿ ಲೀಟರ್‌ಗೆ ಕ್ರಮವಾಗಿ 115.04 ರೂ.ಗಳು ಮತ್ತು 99.25 ರೂ.ಗಳಾಗಿವೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 105.94 ರೂ., 76 ಪೈಸೆ ಹೆಚ್ಚಳ ಮತ್ತು ಡೀಸೆಲ್ ಬೆಲೆ 96 ರೂ., 67 ಪೈಸೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 109.68 ರೂ ಆಗಿದ್ದು, 83 ಪೈಸೆ ಏರಿಕೆಯಾಗಿದೆ ಮತ್ತು ಡೀಸೆಲ್ ಬೆಲೆ 94.62 ರೂ, 70 ಪೈಸೆ ಹೆಚ್ಚಾಗಿದೆ.

ಬೆಂಗಳೂರಲ್ಲಿ ಒಂದು ಲೀಟರ್​ ಪೆಟ್ರೋಲ್ ದರ 105.62 ರೂ., ಡೀಸೆಲ್‌ ದರ 89.70 ರೂ. ಗಳಾಗಿದೆ.
ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರವು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಜಿಗಿತವನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬೆಳವಣಿಗೆಗೆ ಹಾನಿ ಮಾಡುತ್ತದೆ. ಇದು ಇತರ ವಸ್ತುಗಳ ಬೆಲೆಗಳ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತದೆ.
ಏತನ್ಮಧ್ಯೆ, ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಕಾರ್ಯಕ್ರಮ ‘ಮೆಹಂಗಾಯಿ ಮುಕ್ತ್ ಭಾರತ್ ಅಭಿಯಾನ’ವನ್ನು ಪ್ರಾರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ, ಇದರ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಲಿದೆ.
ಕಳೆದ ವರ್ಷ ನವೆಂಬರ್ 3 ರಂದು ಕೇಂದ್ರವು ದೇಶಾದ್ಯಂತ ಚಿಲ್ಲರೆ ಬೆಲೆಗಳನ್ನು ತಗ್ಗಿಸಲು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಇದರ ನಂತರ, ಜನರಿಗೆ ಮತ್ತಷ್ಟು ದರ ಕಡಿಮೆ ಮಾಡಲು ಹಲವಾರು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿದ್ದವು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement