ತನಗಿಂತ 20 ವರ್ಷ ಕಿರಿಯ ವಯಸ್ಸಿನ ಯುವತಿ ಮದುವೆಯಾಗಿ ಸುದ್ದಿಯಲ್ಲಿದ್ದ ಶಂಕರಣ್ಣ ಆತ್ಮಹತ್ಯೆ

ತುಮಕೂರು: ತನಗಿಂತ 20 ವರ್ಷ ಕಿರಿಯ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಣಿಗಲ್​ ತಾಲೂಕಿನ ಚೌಡನಕುಪ್ಪೆ ಗ್ರಾಮದ ಹೊಲವೊಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2021ರ ಅಕ್ಟೋಬರ್​ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಮತ್ತು ಅಕ್ಕಿಮರಿಪಾಳ್ಯದ ಶಂಕರಪ್ಪ ಅವರ ಮದುವೆ ನಡೆದಿದ್ದು, ಅವರಿಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
45 ವರ್ಷ ವಯಸ್ಸಾದರೂ ಶಂಕರಪ್ಪಗೆ ಮದುವೆ ಆಗಿರಲಿಲ್ಲ. ಆಗ ಮೇಘನಾ ಅವರೇ ಹೋಗಿ ತನ್ನನ್ನು ಮದುವೆ ಆಗುವಂತೆ ಪ್ರಸ್ತಾಪ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಶಂಕರಣ್ಣ ಗ್ರಾಮ ಸಮೀಪದ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ​ವೈರಲ್​ ಆಗಿತ್ತು.
ಇಂದು, ಮಂಗಳವಾರ ಬೆಳಗ್ಗೆ ಮನೆಯಿಂದ ಹೊಲದ ಕಡೆ ಹೋಗಿಬರುವುದಾಗಿ ಹೇಳಿದ್ದ ಶಂಕರಣ್ಣನ ಮೃತದೇಹ ದೇಹ ಬೆಳಿಗ್ಗೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದೆ. ಹುಲಿಯೂರುದುರ್ಗ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement